ಸಿಂಡಿಕೇಟ್ ಬ್ಯಾಂಕ್-ಐಸಿಐಸಿಐ ಪ್ರುಡೆನ್ಷಿಯಲ್ ಒಪ್ಪಂದ

7

ಸಿಂಡಿಕೇಟ್ ಬ್ಯಾಂಕ್-ಐಸಿಐಸಿಐ ಪ್ರುಡೆನ್ಷಿಯಲ್ ಒಪ್ಪಂದ

Published:
Updated:

ಬೆಂಗಳೂರು: ಮ್ಯೂಚುವಲ್ ಫಂಡ್ ವಿತರಣೆಗಾಗಿ `ಸಿಂಡಿಕೇಟ್ ಬ್ಯಾಂಕ್~ ಮತ್ತು `ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್~ ಕಂಪೆನಿ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.`ಬ್ಯಾಂಕ್‌ನ ದೇಶದಾದ್ಯಂತದ 2709 ಶಾಖೆಗಳ ಮೂಲಕ ಐಸಿಐಸಿಐ ಪ್ರುಡೆನ್ಷಿಯಲ್ ಎಂಎಫ್‌ನ ವಿವಿಧ ಯೋಜನೆಗಳನ್ನು ಮಾರಾಟ ಮಾಡಲಾಗುವುದು. ಇದರಿಂದ ಬ್ಯಾಂಕ್‌ನ ಶುಲ್ಕ ಆಧಾರಿತ ಆದಾಯ ಹೆಚ್ಚಲಿದೆ ಎಂದು ಸಿಂಡಿಕೇಟ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಆಂಜನೇಯ ಹೇಳಿದ್ದಾರೆ.ಐಸಿಐಸಿಐ ಪ್ರುಡೆನ್ಷಿಯಲ್‌ನ ವ್ಯವಸ್ಥಾಪಕ ನಿರ್ದೇಶಕ ನಿಮೇಶ್ ಷಾ, `ಮ್ಯುಚುವಲ್ ಫಂಡ್ ಉದ್ಯಮದಲ್ಲಿ ಚಿಲ್ಲರೆ ಹೂಡಿಕೆದಾರರ ಪಾತ್ರವೂ ದೊಡ್ಡದೆ. ಗ್ರಾಮೀಣ ಭಾಗದಲ್ಲಿ ಇಂಥ ಗ್ರಾಹಕರನ್ನು ಸಿಂಡಿಕೇಟ್ ಬ್ಯಾಂಕ್ ಮೂಲಕ ತಲುಪಲು ಸಾಧ್ಯವಾಗಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry