ಭಾನುವಾರ, ಮೇ 22, 2022
22 °C

ಸಿಂಡಿಕೇಟ್ ಸದಸ್ಯರ ವಜಾ: ಸರ್ಕಾರದ ಆದೇಶಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ:  ವಿವಿಧ ವಿವಿಗಳ ಸಿಂಡಿಕೇಟ್‌ಗೆ ನಾಮನಿರ್ದೇಶನಗೊಂಡಿದ್ದ ಸದಸ್ಯರನ್ನು ವಜಾಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.ವಿವಾದಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿರುವ ಪೀಠ, ಸರ್ಕಾರಕ್ಕೆ ಮತ್ತು ಸಂಬಂಧಿಸಿದ ವಿವಿಗಳಿಗೆ ನೋಟಿಸ್ ನೀಡಿದೆ.ವಿವಿಧ ವಿವಿಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ನಾಮ ನಿರ್ದೇಶನಗೊಂಡಿದ್ದ ಸಿಂಡಿಕೇಟ್ ಸದಸ್ಯರ ನಾಮಕರಣವನ್ನು ಅವಧಿಗೆ ಮುನ್ನವೇ ಹಿಂಪಡೆದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ವಿವಿ ಸಿಂಡಿಕೇಟ ಸದಸ್ಯ ಕೆ.ಎಸ್.ಜಯಂತ, ಹಾವೇರಿ ಜಾನಪದ ವಿವಿಯ ಎಚ್.ಎಂ. ಚೆನ್ನಪ್ಪಗೋಳ, ಸಂಗಮೇಶ ಪೂಜಾರ, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ವಿಜಯ ಕುಚನೂರಿ,ರಾಜು ಚಿಕ್ಕನಗೌಡ್ರ, ಪ್ರೊ.ಸಿದ್ಧಣ್ಣ ಉತ್ನಾಳ, ಡಾ.ಸಿ.ಎಸ್.ಪಾಟೀಲ, ಮಲ್ಲಿಕಾರ್ಜುನ ದೇವರಮನಿ ಮತ್ತು ಬಳ್ಳಾರಿ ಕೃಷ್ಣದೇವರಾಯ ವಿವಿಯ ವಿಜಯಲಕ್ಷ್ಮಿ, ರಾಜು ಬಾಕಳೆ, ಹರಿಕುಮಾರ, ಅಲ್ಲಾಬಕ್ಷ್,ಜಂಬಯ್ಯ ನಾಯಕ  ಇಲ್ಲಿನ ಸಂಚಾರಿ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.