ಬುಧವಾರ, ಜೂನ್ 16, 2021
22 °C

ಸಿಂದಗಿಯಲ್ಲಿ ಮಹಿಳೆಯರ ಹಕ್ಕು ವಿಚಾರ ಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ವಾರ್ತೆ

ಸಿಂದಗಿ: ನಗರದ ಊರಿನ ಹಿರಿಯ ಮಠದ ಲಿಂ.ಘನಲಿಂಗ ಚಕ್ರವರ್ತಿ ಶಾಂತವೀರ ಪಟ್ಟಾಧ್ಯಕ್ಷರ 34ನೇ ಪುಣ್ಯ ಸ್ಮರಣೋತ್ಸವದ ಸಂದರ್ಭದಲ್ಲಿ ಬುಧ ವಾರ ಶಿವಾನುಭವ ಮಂಟಪದಲ್ಲಿ ಇನ್ನರ್‌ ವೀಲ್ ಕ್ಲಬ್ ಕಲ್ಯಾಣನಗರ ಸಹಯೋಗದಲ್ಲಿ ಶ್ರೀಮಠ ಹಮ್ಮಿ ಕೊಂಡಿದ್ದ ಮಹಿಳಾ ಹಬ್ಬ ಸಮಾ ರಂಭದಲ್ಲಿ ‘ಮಹಿಳೆಯರ ಹಕ್ಕು ಮತ್ತು ಮಹಿಳಾ ಸುರಕ್ಷತೆ’ ಸಂವಾದ ಗೋಷ್ಠಿ ಅತ್ಯಂತ ಅರ್ಥಪೂರ್ಣವಾಗಿ ವಿನೂತನ ರೀತಿಯಲ್ಲಿ ನಡೆಯಿತು.ಸಾಮಾಜಿಕ ಕ್ಷೇತ್ರ, ಕಾನೂನು ಕ್ಷೇತ್ರ, ವೈದ್ಯಕೀಯ ಕ್ಷೇತ್ರ ಹಾಗೂ ಆಧ್ಯಾತ್ಮಿಕ ಕ್ಷೇತ್ರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಪ ರೂಪದ ಸೇವೆ ಸಲ್ಲಿಸಿದ ಮಹಾದೇವಿ ಬಮ್ಮಣ್ಣಿ, ಗೀತಾ ಸಂಗೆ, ಡಾ.ಶಾರದಾ ನಾಡಗೌಡ ಮತ್ತು ಈಶ್ವರೀಯ ವಿವಿ ಬಿ.ಕೆ.ಪವಿತ್ರಾ ಈ  ಮಹಿಳೆಯರು ಸಂವಾದ ಗೋಷ್ಠಿಯಲ್ಲಿ ಮೌಲಿಕವಾದ ವಿಷಯ ಮಂಡನೆ ಮಾಡಿದರು.ಗೋಷ್ಠಿಯ ನೇತೃತ್ವ ವಹಿಸಿದ್ದ ಬರಹಗಾರ್ತಿ ಗೀತಾ ಹರಿಹರ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹಿಳೆಯರ ಹಕ್ಕುಗಳು ಮತ್ತು ಮಹಿಳೆಯರ ಸುರಕ್ಷತೆ ಬಗೆಗೆ ತಲಾ ಮೂರು ಪ್ರಶ್ನೆಗಳನ್ನು ಕೇಳುವ ಮೂಲಕ ವಿಷಯ ಮಂಡನೆಗೆ ಚಾಲನೆ ನೀಡಿದರು.ಅವರು ಗೋಷ್ಠಿಯ ಆಶಯ ಕುರಿತಾಗಿಯೂ ಮಾತನಾಡಿದರು. ಜೊತೆಗೆ ಸಭೆಯಲ್ಲಿದ್ದ ಮಹಿಳೆಯರು ಹಾಗೂ ಪುರುಷರು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳುವ ಮೂಲಕ ಗೋಷ್ಠಿಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿದರು. ಮಹಿಳೆ ಯರು ಪ್ರಚಲಿತ ಆಧುನಿಕ ಸಂಕೀರ್ಣ ವ್ಯವಸ್ಥೆಯ ಸಂದರ್ಭದಲ್ಲಿ ಎದುರಿಸು ತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವಂಥ ಮಹತ್ವದ ಚರ್ಚೆ ನಡೆಯಿತು.ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವಿಜಾಪುರ ಮಕ್ಕಳ ಸಹಾಯವಾಣಿ ಮುಖ್ಯಸ್ಥೆ ಸುನಂದಾ ತೋಳಬಂದಿ ಮಾತನಾಡಿ, ಮಹಿಳೆಯರು ಆಯೋಜಿ ಸಿದ ಪ್ರಸ್ತುತ ಸಂವಾದ ಗೋಷ್ಠಿ ವಿನೂ ತನ ಪ್ರಯೋಗವಾಗಿದೆ. ಇದು ಮಹಿಳೆ ಯರಿಗೆ ತುಂಬಾ ಉಪಯುಕ್ತವಾಗಿದೆ. ಇನ್ನರ್‌ವೀಲ್ ಕ್ಲಬ್ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದರು.ಇದೇ ಸಂದರ್ಭದಲ್ಲಿ ಇನ್ನರವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನಾ ಅಶೋಕ ಮನಗೂಳಿ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು. ಅಲ್ಲದೇ ಮಹಿಳಾ ಹಬ್ಬ ನಿಮಿತ್ತ ಏರ್ಪಡಿಸಿದ್ದ ಕರಕುಶಲ ವಸ್ತು ಪ್ರದರ್ಶನ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತುಸುಮನ್ ಹಿರೇಮಠ ಸ್ವಾಗತಿಸಿದರು. ರೇಣುಕಾ ಹಿರೇಮಠ ನಿರೂಪಿಸಿದರು. ನಾಗರತ್ನಾ ಮನಗೂಳಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.