ಮಂಗಳವಾರ, ಜೂನ್ 15, 2021
21 °C

ಸಿಂಧನೂರು: ಬಣ್ಣದಲ್ಲಿ ಮಿಂದೆದ್ದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಪ್ರೀತಿ, ಸ್ನೇಹ, ವಿಶ್ವಾಸದ ಪ್ರತೀಕವಾದ ಹೋಳಿ ಹಬ್ಬವನ್ನು ಶುಕ್ರವಾರ ಜನತೆ ಪರಸ್ಪರ ಬಣ್ಣ ಎರಚಿ ಸಂಭ್ರಮದಿಂದ ಆಚರಿಸಿದರು.ಮಕ್ಕಳಾದಿಯಾಗಿ ಮಹಿಳೆಯರು, ಯುವಕ, ಯುವತಿಯರು, ನೌಕರರು ಸೇರಿದಂತೆ ಎಲ್ಲ ವಲಯದ ಜನತೆ ಓಕುಳಿಯಲ್ಲಿ ಮಿಂದೆದ್ದರು. ಬ್ರಾಹ್ಮಣರ ಓಣಿ, ಮಾರ್ವಾಡಿ ಗಲ್ಲಿ, ನಟರಾಜ್ ಕಾಲೋನಿ, ಸುಕಾಲಪೇಟೆ, ಆದರ್ಶ ಕಾಲೋನಿ, ಬಸವ ನಗರ, ಪಿ.ಡಬ್ಲ್ಯೂ.ಡಿ. ಕ್ಯಾಂಪ್ ಮತ್ತಿತರ ವಾರ್ಡ್‌ಗಳಲ್ಲಿ ವೈವಿಧ್ಯಮಯ ರಂಗು ಹಚ್ಚಿಕೊಂಡು ಓಡಾಡುತ್ತಿದ್ದುದು ಸಾಮಾನ್ಯವಾಗಿತ್ತು.ಗಾಂಧಿ ವೃತ್ತದಲ್ಲಿ ನೂರಾರು ಯುವಕರು ಬಣ್ಣ ಹಚ್ಚಿಕೊಂಡು ಒಬ್ಬರನ್ನೊಬ್ಬರು ಎತ್ತಿ ಕೇಕೆ ಹಾಕುತ್ತಾ ಸಂತಸಪಟ್ಟರು. ಕೆಲವರು ಸ್ನೇಹಿತರು ಮತ್ತು ಗಣ್ಯ ವ್ಯಕ್ತಿಗಳನ್ನು ಹುಡುಕಿ ಬಣ್ಣ ಹಾಕುವುದು ಕಂಡುಬಂತು.ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ,  ಗೌತಮ್ ಮೆಹ್ತಾ, ಸರಸ್ವತಿ ಪಾಟೀಲ್, ಅಮರೇಶಪ್ಪ ಮೈಲಾರ ನೂರಾರು ನಾಗರಿಕರು ಓಕುಳಿಯಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.