ಗುರುವಾರ , ಮೇ 6, 2021
31 °C

ಸಿಂಧಿ ಆಸ್ಪತ್ರೆಯಲ್ಲಿ ಮೂಳೆ ಮರು ಜೋಡಣೆ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿಂಧಿ ಯುವ ಒಕ್ಕೂಟ ಹಾಗೂ ಪಿ.ಡಿ ಹಿಂದೂಜಾ ಸಿಂಧಿ ಆಸ್ಪತ್ರೆ, ತನ್ನ ಸುವರ್ಣ ಮಹೋತ್ಸವದ ಅಂಗವಾಗಿ, ಇಂಗ್ಲೆಂಡ್‌ನ ವೈದ್ಯರ ಸಹಯೋಗದೊಂದಿಗೆ 22 ರೋಗಿಗಳಿಗೆ ಸೊಂಟದ ಮೂಳೆ ಮರು ಜೋಡಣೆ ಚಿಕಿತ್ಸೆ ನಡೆಸಿದೆ.ಮಂಡಿ ಬದಲಾವಣೆ ಮತ್ತು ವಿರೂಪಗೊಂಡ ಹಾಗೂ ಮೃದು ಮೂಳೆಗಳ ಬದಲಾವಣೆ ಚಿಕಿತ್ಸೆ ಸೆ.17ರಿಂದ 21ರವರೆಗೆ ನಡೆಯಿತು. ರಾಜ್ಯದ ಬಡವರು ಹಾಗೂ ಕಡಿಮೆ ಸವಲತ್ತು ಹೊಂದಿರುವ ರೋಗಿಗಳಿಗಾಗಿ ಉಚಿತವಾಗಿ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು.ಇಂಗ್ಲೆಂಡ್‌ನ ಭಾರತೀಯ ವೈದ್ಯ ಡಾ.ಅನಂತ ರಾಮ ಶೆಟ್ಟಿ, ಹತ್ತಕ್ಕೂ ಹೆಚ್ಚು ರೋಗಿಗಳಿಗೆ ಮೂಳೆ ಶಸ್ತ್ರ ಚಿಕಿತ್ಸೆ ನಡೆಸಿಕೊಟ್ಟರು. ಇತರ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಪ್ರತಿ ಮೂಳೆ ದುರಸ್ಥಿಗೆ ಸಾಮಾನ್ಯವಾಗಿ 2 ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಇದಕ್ಕೆ 1.5-2 ಲಕ್ಷ ರೂ. ತಗುಲುತ್ತದೆ. ಆದರೆ ಈ ಹೊಸ ತಂತ್ರಜ್ಞಾನದಿಂದ 30,000 -40,000ರೂ.ಗೆ ಶಸ್ತ್ರಚಿಕಿತ್ಸೆ ಸಾಧ್ಯವಾಗಿದೆ. ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆ ಭರಿಸಿದೆ.ಈ ಸಂದರ್ಭದಲ್ಲಿ ಮಾತನಾಡಿದ ಸಿಂಧಿ ಯುವ ಒಕ್ಕೂಟದ ಅಧ್ಯಕ್ಷ ಸುರೇಶ್ ಭಾಟಿಯಾ, `1961ರಲ್ಲಿ ಎಂಟು ಮಂದಿ ಸಿಂಧಿ ಉದ್ಯಮಿಗಳು 800 ರೂಪಾಯಿಯೊಂದಿಗೆ ಆರಂಭಿಸಿದ ಆಸ್ಪತ್ರೆ ಇಂದು ಸಂಪಂಗಿರಾಮನಗರದಲ್ಲಿ ಬೃಹತ್ತಾಗಿ ಬೆಳೆದಿದೆ.ಮುಂದಿನ ತಿಂಗಳು 40 ಹೆಚ್ಚುವರಿ ಹಾಸಿಗೆ ಸಾಮರ್ಥ್ಯದ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಹಿಂದುಳಿದವರಿಗೆ ಆರೋಗ್ಯ ಸೇವೆ ಒದಗಿಸುವ ಗುರಿ ಇದೆ. ಇದೊಂದು ಲಾಭ ರಹಿತ ಸಂಸ್ಥೆಯಾಗಿದೆ~ ಎಂದರು. ಆಸ್ಪತ್ರೆಯ ನಿರ್ದೇಶಕ ಡಾ.ಟಿ ಚಂದ್ರಶೇಖರ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.