ಬುಧವಾರ, ಜೂನ್ 16, 2021
27 °C

ಸಿಂಧುರತ್ನ ಬೆಂಕಿ ಅವಘಡಕ್ಕೆ ಕೇಬಲ್ ಸಮಸ್ಯೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇಬ್ಬರು ಅಧಿಕಾರಿ­ಗಳ ಸಾವು ಮತ್ತು ಏಳು ನಾವಿಕರು ಗಂಭೀರವಾಗಿ ಅಸ್ವಸ್ಥಗೊಳ್ಳಲು ಕಾರಣ­ವಾದ ಐಎನ್‌ಎಸ್‌ ಸಿಂಧುರತ್ನ ಜಲಾಂತರ್ಗಾಮಿಯಲ್ಲಿ ಕಳೆದ ವಾರ ಸಂಭವಿಸಿದ ಬೆಂಕಿ ಅವಘಡಕ್ಕೆ ನೌಕೆಯ ಕೇಬಲ್‌ನಲ್ಲಿದ್ದ ಸಮಸ್ಯೆ ಕಾರಣ ಎಂದು ತಿಳಿದು ಬಂದಿದೆ.ಆರಂಭದಲ್ಲಿ ಭಯಪಟ್ಟಂತೆ ಅವಘ­ಡಕ್ಕೆ ಬ್ಯಾಟರಿ ಕೋಣೆಯಲ್ಲಿನ ಸಮಸ್ಯೆ ಕಾರಣವಲ್ಲ. ಕೇಬಲ್ ಸಮಸ್ಯೆಯಿಂದಾಗಿ ಬೆಂಕಿ ಕಾಣಿಸಿಕೊಂಡಿತು ಎಂದು ಫೆ. 26ರಂದು ನಡೆದ ದುರ್ಘಟನೆ ಬಗ್ಗೆ ತನಿಖೆ ನಡೆಸಿದ ಸಮಿತಿ ಹೇಳಿದೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.ನೌಕೆಯ ಬ್ಯಾಟರಿ ವಿಭಾಗ ಅತ್ಯಂತ ಸುರಕ್ಷಿತವಾಗಿದೆ. ಅದಕ್ಕಿಂತ ಮೇಲಿನ ಭಾಗದಲ್ಲಿ ಬೆಂಕಿ ಕಾಣಿಸಿ­ಕೊಂಡಿದೆ. ಈ ದುರ್ಘಟನೆ ಮತ್ತು ಹಿಂದೆ ನಡೆದಿರುವ ದುರಂತದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ   ಎಂದು ಅಧಿಕಾರಿಗಳು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.