ಸಿಂಧು, ದೀಪಾ, ಸಾಕ್ಷಿಗೆ ಖೇಲ್ ರತ್ನ; ಅಜಿಂಕ್ಯ ರೆಹಾನೆಗೆ ಅರ್ಜುನ ಪ್ರಶಸ್ತಿ

7

ಸಿಂಧು, ದೀಪಾ, ಸಾಕ್ಷಿಗೆ ಖೇಲ್ ರತ್ನ; ಅಜಿಂಕ್ಯ ರೆಹಾನೆಗೆ ಅರ್ಜುನ ಪ್ರಶಸ್ತಿ

Published:
Updated:
ಸಿಂಧು, ದೀಪಾ, ಸಾಕ್ಷಿಗೆ ಖೇಲ್ ರತ್ನ; ಅಜಿಂಕ್ಯ ರೆಹಾನೆಗೆ ಅರ್ಜುನ ಪ್ರಶಸ್ತಿ

ನವದೆಹಲಿ: ರಿಯೊ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ ಭಾರತೀಯ ಕ್ರೀಡಾಪಟುಗಳಾದ ಪಿವಿ ಸಿಂಧು, ಸಾಕ್ಷಿ ಮಲಿಕ್,  ದೀಪಾ ಕರ್ಮಾಕರ್ ಮತ್ತು ಜಿತು ರಾಯ್ 2016ರ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೇಶದ ಕ್ರೀಡಾಪಟುಗಳಿಗೆ ನೀಡುವ ಪರಮೋನ್ನತ ಪ್ರಶಸ್ತಿಯಾಗಿದೆ ಇದು.

ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಬೆಳ್ಳಿ ಪದಕ ಗೆದ್ದ  ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಮಹಿಳೆಯರ ಕುಸ್ತಿಯಲ್ಲಿ ಮೊದಲ ಬಾರಿ ಕಂಚು ಗೆದ್ದ ಸಾಕ್ಷಿ ಮಲಿಕ್, ಜಿಮ್ನಾಸ್ಟಿಕ್ಸ್ ಆಟದಲ್ಲಿ ಫೈನಲ್ ಪ್ರವೇಶಿಸಿದ್ದ ದೀಪಾ ಕರ್ಮಾಕರ್ ಮತ್ತು ಶೂಟಿಂಗ್‍ನಲ್ಲಿ ಪದಕ ಗೆಲ್ಲದಿದ್ದರೂ ಉತ್ತಮ ಪ್ರದರ್ಶನ ನೀಡಿದ್ದ ಜಿತು ರಾಯ್ ಅವರಿಗೆ ಪ್ರಸಕ್ತ ವರ್ಷದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ರಾಜೀವ್ ಗಾಂಧಿ ಖೇಲ್ ರತ್ನ  ಪ್ರಶಸ್ತಿ

ಪಿವಿ ಸಿಂಧು  -ಬ್ಯಾಡ್ಮಿಂಟನ್

ದೀಪಾ ಕರ್ಮಾಕರ್ - ಜಿಮ್ನಾಸ್ಟಿಕ್ಸ್

ಜಿತು ರಾಯ್ - ಶೂಟಿಂಗ್

ಸಾಕ್ಷಿ ಮಲಿಕ್ -  ಕುಸ್ತಿ

ಅರ್ಜುನ ಪ್ರಶಸ್ತಿ

ಶ್ರೀ ರಜತ್ ಚೌಹಾಣ್ - ಬಿಲ್ವಿದ್ಯೆ

ಲಲಿತಾ ಬಾಬರ್ - ಥ್ಲೆಟಿಕ್ಸ್

ಸೌರವ್ ಕೊಠಾರಿ - ಬಿಲಿಯರ್ಡ್ ಮತ್ತು ಸ್ನೂಕರ್

ಶಿವ ಥಾಪಾ - ಬಾಕ್ಸಿಂಗ್

ಅಜಿಂಕ್ಯ ರೆಹಾನೆ-  ಕ್ರಿಕೆಟ್

ಸುಬ್ರತಾ ಪೌಲ್  -ಫುಟ್ಬಾಲ್

ರಾಣಿ - ಹಾಕಿ

ರಘುನಾಥ್ ವಿ. ಆರ್-  ಹಾಕಿ

ಗುರ್ಪ್ರೀತ್ ಸಿಂಗ್-  ಶೂಟಿಂಗ್

ಅಪೂರ್ಮಿ ಚಂಡೇಲಾ -ಶೂಟಿಂಗ್

ಸೌಮ್ಯಜಿತ್ ಘೋಷ್-  ಟೇಬಲ್ ಟೆನಿಸ್

ವಿನೇಶ್ ಫೋಗಟ್ - ಕುಸ್ತಿ

ಅಮಿತ್ ಕುಮಾರ್ - ಕುಸ್ತಿ

ಸಂದೀಪ್ ಸಿಂಗ್ ಮನ್ನ್ -  ಪ್ಯಾರಾ ಅಥ್ಲೆಟಿಕ್ಸ್

ವಿರೇಂದ್ರ ಸಿಂಗ್- ಕುಸ್ತಿ

ಧ್ಯಾನ್ ಚಂದ್ ಪ್ರಶಸ್ತಿ

ಸತ್ತಿ ಗೀತಾ - ಅಥ್ಲೆಟಿಕ್ಸ್

ಸೆಲ್ವಾನಸ್ ಡುಂಗ್ ಡುಂಗ್ -ಹಾಕಿ

ರಾಜೇಂದ್ರ ಪ್ರಹ್ಲಾದ್ ಶೆಲ್ಕೆ-ರೋಯಿಂಗ್

ದ್ರೋಣಾಚಾರ್ಯ ಪ್ರಶಸ್ತಿ

ನಾಗಪುರಿ ರಮೇಶ್ -ಅಥ್ಲೆಟಿಕ್ಸ್

ಸಾಗರ್ ಮಲ್ ದಯಾಳ್ - ಬಾಕ್ಸಿಂಗ್

ರಾಜ್ ಕುಮಾರ್ ಶರ್ಮಾ -ಕ್ರಿಕೆಟ್

ಬಿಶೇಶ್ವರ್ ನಂದಿ- ಜಿಮ್ನಾಸ್ಟಿಕ್ಸ್

ಎಸ್ ಪ್ರದೀಪ್ ಕುಮಾರ್ - ಈಜು (ಜೀವಮಾನ ಸಾಧನೆ)

ಮಹಾಬೀರ್ ಸಿಂಗ್ - ಕುಸ್ತಿ  (ಜೀವಮಾನ ಸಾಧನೆ)

ಖೇಲ್ ರತ್ನ ಪ್ರಶಸ್ತಿಯು ಪದಕ, ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ರು.7.5 ಲಕ್ಷ ನಗದು ಬಹುಮಾನವನ್ನು ಹೊಂದಿದೆ. ಅದೇ ವೇಳೆ ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಮತ್ತು ಧ್ಯಾನ್‍ಚಂದ್ ಪ್ರಶಸ್ತಿ ವಿಜೇತರಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ತಲಾ ರು. 5 ಲಕ್ಷ ನಗದು ಬಹುಮಾನವನ್ನು ನೀಡಲಾಗುವುದು.ಆಗಸ್ಟ್ 29, 2016ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry