ಸಿಂಹ ಸಾವು

7

ಸಿಂಹ ಸಾವು

Published:
Updated:

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದ ಪುನರ್ವಸತಿ ಕೇಂದ್ರದಲ್ಲಿದ್ದ ‘ರವಿ’ ಎಂಬ 22 ವರ್ಷದ ಸಿಂಹ ಗುರುವಾರ ರಾತ್ರಿ ಸಾವನ್ನಪ್ಪಿದೆ.‘ಸಿಂಹವು ಹಲವು ದಿನಗಳಿಂದ ಶ್ವಾಸಕೋಶ, ಪಿತ್ತಜನಕಾಂಗ ತೊಂದರೆ ಹಾಗೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿತ್ತು. ಅಲ್ಲದೇ ಸಾಕಷ್ಟು ವಯಸ್ಸಾಗಿತ್ತು. ಆದ ಕಾರಣ ಸಹಜವಾಗಿಯೇ ಸಾವನ್ನಪ್ಪಿದೆ’ ಎಂದು ಉದ್ಯಾನದ ವೈದ್ಯಾಧಿಕಾರಿ ಡಾ. ಚೆಟ್ಟಿಯಪ್ಪ ತಿಳಿಸಿದರು.‘ಸಿಂಹವನ್ನು 2000ನೇ ಡಿಸೆಂಬರ್ 24 ರಂದು ಗುಲ್ಬರ್ಗದ ‘ಗೀತಾ ಸರ್ಕಸ್’ನಿಂದ್ ವಶಪಡಿಸಿಕೊಂಡು ಉದ್ಯಾನಕ್ಕೆ ತರಲಾಗಿತ್ತು. ಸರ್ಕಸ್‌ನಲ್ಲಿ ಹಿಂಸೆ ಅನುಭವಿಸಿದ್ದ ಸಿಂಹವು ಶ್ವಾಸಕೋಶ ತೊಂದರೆ ಹಾಗೂ ಇನ್ನಿತರೆ ಸಮಸ್ಯೆಗಳಿಂದ ಬಳಲುತ್ತಿತ್ತು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry