ಸಿಆರ್‌ಆರ್ ಇನ್ನಷ್ಟು ಕಡಿತ: ಆರ್‌ಬಿಐ ಇಂಗಿತ

7

ಸಿಆರ್‌ಆರ್ ಇನ್ನಷ್ಟು ಕಡಿತ: ಆರ್‌ಬಿಐ ಇಂಗಿತ

Published:
Updated:

ನವದೆಹಲಿ (ಪಿಟಿಐ): ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಸಮಸ್ಯೆಇನ್ನೂ ತೀವ್ರ ಸ್ವರೂಪದಲ್ಲಿ ಇರುವುದರಿಂದ, ಸಾಲ ನೀಡಿಕೆಗೆ ಬ್ಯಾಂಕ್‌ಗಳ ಬಳಿ ಇನ್ನಷ್ಟು ಹಣ ಲಭ್ಯ ಇರುವಂತಾಗಲು ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದೆ. ಈ ಉದ್ದೇಶಕ್ಕೆ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) ಇನ್ನಷ್ಟು ಕಡಿಮೆ ಮಾಡುವ ಸಾಧ್ಯತೆಗಳು ಇವೆ. `ಹಣದ ಪೂರೈಕೆ ಪರಿಸ್ಥಿತಿ ಮೇಲೆ ನಿಗಾ ಇರಿಸಲಾಗಿದೆ. ಮಾ   ರ್ಚ್ ತಿಂಗಳಲ್ಲಿ  ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಪ್ರಕಟಿಸುವಾಗ `ಸಿಆರ್‌ಆರ್~ ಅನ್ನು ಇನ್ನಷ್ಟು ಕಡಿತ ಮಾಡಬಹುದು ಎಂದು  `ಆರ್‌ಬಿಐನ ಡೆಪ್ಯುಟಿ ಗವರ್ನರ್ ಸುಬೀರ್ ಗೋಕರ್ಣ ಹೇಳಿದ್ದಾರೆ. ಕೇಂದ್ರೀಯ ಬ್ಯಾಂಕ್ ಈಗಾಗಲೇ `ಸಿಆರ್‌ಆರ್~ ಅನ್ನು ಶೇ 0.5ರಷ್ಟು ಇಳಿಸಿದೆ. ಇದರಿಂದ ಬ್ಯಾಂಕ್‌ಗಳ ಬಳಿ ್ಙ32ಸಾವಿರ ಕೋಟಿಗಳಷ್ಟು ಮೊತ್ತ ಲಭ್ಯ ಇದೆ. `ಆರ್‌ಬಿಐ~,  ಬ್ಯಾಂಕ್‌ಗಳ ಬಳಿ ಇರುವ ಸರ್ಕಾರಿ ಸಾಲಪತ್ರಗಳನ್ನು ಖರೀದಿಸುವ ಮೂಲಕವೂ ಬ್ಯಾಂಕ್‌ಗಳ ಬಳಿ ಹೆಚ್ಚು ಹಣ ಲಭ್ಯವಾಗಿರುವಂತೆ ನೋಡಿಕೊಳ್ಳುತ್ತಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry