ಶನಿವಾರ, ಮೇ 30, 2020
27 °C

ಸಿಆರ್‌ಎಸ್ ಹುಟ್ಟುಹಬ್ಬಕ್ಕೆ ಭರದ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಸಂಸದ ಚಲುವರಾಯಸ್ವಾಮಿ ಅವರ 50ನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಜಿಲ್ಲಾ ಜೆಡಿಎಸ್ ನೇತೃತ್ವದಲ್ಲಿ ಜೂ. 1ರಂದು ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ `ಮಧುರ ಮಿಲನ~ ಸಂಗೀತ ಸಂಜೆ ಮತ್ತು ಅಭಿನಂದನಾ ಸಮಾರಂಭ ಆಯೋಜಿಸಿದ್ದಾರೆ.ನಿರ್ದೇಶಕ ಎಸ್.ನಾರಾಯಣ್, ಸಂಗೀತ ನಿರ್ದೇಶಕ ಗುರುಕಿರಣ್ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯ ಲಿದ್ದು, ಅನೇಕ ಚಿತ್ರನಟಿಯರು ಭಾಗವಹಿಸಲಿದ್ದಾರೆ. ಅಲ್ಲದೆ, ಕೇರಳದ ತಂಡದಿಂದ ಇದೇ ಸಂದರ್ಭದಲ್ಲಿ ವಿಶಿಷ್ಟವಾಗಿ ಪಟಾಕಿಗಳನ್ನು ಸಿಡಿಸುವ ಕಾರ್ಯಕ್ರಮವು ನಡೆಯಲಿದೆ ಎಂದು ಜಿಲ್ಲಾ ಅಧ್ಯಕ್ಷ ಡಿ.ರಮೇಶ್ ತಿಳಿಸಿದ್ದಾರೆ.ಸಂಜೆ ಐದು ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಚಲುವರಾಯಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದರು.ಜೆಡಿಎಸ್ ಮುಖಂಡರು ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಪಕ್ಷದ ವಿವಿಧ ಶಾಸಕರು ಭಾಗವಹಿಸುವರು ಎಂದರು.ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಹೀಗೆ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸುವ ಔಚಿತ್ಯ ಇದೆಯಾ ಎಂಬ ಪ್ರಶ್ನೆಗೆ, `ಕಳೆದ ಮೂರು ವರ್ಷಗಳಲ್ಲಿ ಒಂದಿಲ್ಲೊಂದು ಚುನಾವಣೆಗಳು ಇದ್ದವು. ಹೀಗಾಗಿ, ನಾಯಕರ ಜನ್ಮದಿನವನ್ನು ಸಂತೋಷವಾಗಿ ಆಚರಿಸಲಾಗಿರಲಿಲ್ಲ. ಇದು 50ನೇ ವರ್ಷವಾದ ಕಾರಣ ಆಚರಿಸಲಾಗುತ್ತಿದೆ~ ಎಂದರು.ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಚಿತ್ರನಟನಾದ ಪೂಜಾಗಾಂಧಿ, ಐಂದ್ರಿತಾ ರೇ, ಯೋಗೇಶ್, ಪಂಕಜ್, ಎಸ್. ನಾರಾಯಣ್ ಮತ್ತಿತರರು ಭಾಗವಹಿಸ ಲಿದ್ದು, ಗುರುಕಿರಣ್ ಸಂಗೀತ ಸಂಜೆಯಲ್ಲಿ ಗಾಯಕಿ ಉಷಾ ಉತುಪ್ ಅವರು ಗಾಯನ ಪ್ರಸ್ತುತ ಪಡಿಸಲಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಉಪಾಧ್ಯಕ್ಷ ಎಂ.ಜೆ.ಚಿಕ್ಕಣ್ಣ ಮತ್ತು ಪರಿಶಿಷ್ಟ ಜಾತಿ,ವರ್ಗ ವಿಭಾಗದ ಅಧ್ಯಕ್ಷ ಸೋಮಶೇಖರ್ ಕೆರೆಗೋಡು ಅವರು ಇದ್ದರು.ಮನರಂಜನೆಗೆ ಮತ್ತೆ ಕ್ರೀಡಾಂಗಣ: ಈ ಮೂಲಕ ಸರ್ ಎಂ.ವಿ. ಕ್ರೀಡಾಂಗಣ ಮತ್ತೆ ಕ್ರೀಡಾಯೇತರ ಕಾರ್ಯಕ್ರಮ ಗಳಿಗೆ ವೇದಿಕೆಯಾಗುತ್ತಿದೆ. ಈ ಹಿಂದೆ ಇಲ್ಲಿ ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಜನ್ಮದಿನ ಮತ್ತು ಭಾಗ್ಯಲಕ್ಷ್ಮಿ ಸೀರೆ ವಿತರಣೆ ಕಾರ್ಯಕ್ರಮ ನಡೆದಿತ್ತು.ಎರಡೂ ಸಂದರ್ಭಗಳಲ್ಲಿ ಕ್ರೀಡಾಂಗಣ ಹೀಗೆ ಕ್ರೀಡೆಯೇತರ ಕಾರ್ಯಕ್ರಮಗಳಿಗೆ ಬಳಕೆ ಆಗುವುದುಕ್ಕೆ ಆಕ್ಷೇಪ ವ್ಯಕ್ತ ವಾಗಿದ್ದರು, ಭಾಗ್ಯಲಕ್ಷ್ಮಿ ಸೀರೆ ವಿತರಣೆ ಸರ್ಕಾರಕ್ಕೆ ಕಾರ್ಯಕ್ರಮ ಆಗಿದ್ದರಿಂದ ಆಕ್ಷೇಪ ಗಮನಸೆಳೆದಿರಲಿಲ್ಲ.ಆಗ, ಇನ್ನು ಮುನ್ನ ಕ್ರೀಡೆಯನ್ನು ಹೊರತುಪಡಿಸಿದ ಕಾರ್ಯಕ್ರಮಗಳಿಗೆ ಕ್ರೀಡಾಂಗಣ ಬಳಕೆಗೆ ಕೊಡಬಾರದು ಎಂಬ ವಾದವೂ ಕೇಳಿಬಂದಿತ್ತು. ಆದರೆ, ಜಿಲ್ಲೆಯಲ್ಲಿ ವಿಶಾಲವಾದ ಸ್ಥಳ ಕ್ರೀಡಾಂಗಣವೇ ಆಗಿರುವ ಹಿನ್ನೆಲೆಯಲ್ಲಿ ಆಕ್ಷೇಪಗಳ ನಡುವೆಯೂ ಕ್ರೀಡೆಯೇತರ ಕಾರ್ಯಕ್ರಮಗಳಿಗೆ ಇದು ಬಳಕೆಯಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.