ಶುಕ್ರವಾರ, ಏಪ್ರಿಲ್ 16, 2021
31 °C

ಸಿಆರ್‌ವೈ (ಚೈಲ್ಡ್ ರೈಟ್ಸ್ ಅಂಡ್ ಯೂ) ಸಂಸ್ಥೆ ಹೀಗೆ ಹೇಳುತ್ತದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 2007ರ ವರದಿಯ ಪ್ರಕಾರ ಶೇ 53.2ರಷ್ಟು ಮಕ್ಕಳು ಒಂದಲ್ಲಾ ಒಂದು ರೀತಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಗುರಿ ಆಗುತ್ತಿದ್ದಾರೆ. ಆದರೆ ಈ ವಿಷಯವನ್ನು ಹೊರಗೆಡಹುವವರು ಕೇವಲ ಶೇ 6ರಷ್ಟು ಮಕ್ಕಳು. ಶೇ 50ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಮಕ್ಕಳು ನಂಬಿದ್ದ ಪರಿಚಿತರೇ ಆಗಿರುತ್ತಾರೆ.

-ದೇಶದಲ್ಲಿ ಪ್ರತಿ ವರ್ಷ 8945 ಮಕ್ಕಳು ಕಾಣೆಯಾಗುತ್ತಿದ್ದಾರೆ.-ವರ್ಷಂಪ್ರತಿ 5 ಲಕ್ಷ ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ.-ಲೈಂಗಿಕ ಕಾರ್ಯಕರ್ತರಲ್ಲಿ ಶೇ 40ರಷ್ಟು ಮಕ್ಕಳೇ ಇದ್ದಾರೆ. ಇವರಲ್ಲಿ  2 ದಶಲಕ್ಷ ಮಂದಿ 5ರಿಂದ 15 ವರ್ಷದ ಒಳಗಿನವರು ಮತ್ತು 3.3 ದಶಲಕ್ಷ ಮಂದಿ 15ರಿಂದ 18 ವರ್ಷದ ಒಳಗಿನವರು.-ಈ ಮಕ್ಕಳಲ್ಲಿ ಶೇ 80ರಷ್ಟು ಮಂದಿ ಐದು ಮಹಾನಗರಗಳಲ್ಲಿ ನೆಲೆಸಿದ್ದಾರೆ. ಆ ಕ್ರೂರ ನಗರಗಳೆಂದರೆ- ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಮತ್ತು ಬೆಂಗಳೂರು.-ಈ ಮಕ್ಕಳಲ್ಲಿ ಶೇ 71ರಷ್ಟು ಮಂದಿ ಅನಕ್ಷರಸ್ಥರು.

ಕಾನೂನು ರಕ್ಷಣೆ

ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ಕೆಲವು ಕಾನೂನುಗಳು ನಮ್ಮಲ್ಲಿವೆ. ಅವುಗಳೆಂದರೆ-ಅನೈತಿಕ ಮಾರಾಟ (ತಡೆ) ಕಾಯ್ದೆ: ಇದು 16 ವರ್ಷದ ಒಳಗಿನ ಮಕ್ಕಳು ವಾಣಿಜ್ಯ ಉದ್ದೇಶದ ಲೈಂಗಿಕ ಕಾರ್ಯಕ್ಕೆ ಬಳಕೆಯಾಗುವುದಕ್ಕೆ ತಡೆ ಒಡ್ಡುತ್ತದೆ.-ಬಾಲ ನ್ಯಾಯ ಕಾಯ್ದೆ: ಇದರ ಸೆಕ್ಷನ್ 26 (ಮಕ್ಕಳು ಅಥವಾ ಬಾಲ ಉದ್ಯೋಗಿಯ ಶೋಷಣೆ) ಮಕ್ಕಳನ್ನು ಅಪಾಯಕಾರಿ ಹುದ್ದೆಗಳಲ್ಲಿ ತೊಡಗಿಸುವವರಿಗೆ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುತ್ತದೆ.-ಮಕ್ಕಳ ವಿವಾಹ ತಡೆ ಕಾಯ್ದೆ: 18 ವರ್ಷದೊಳಗಿನ ಹೆಣ್ಣು ಮಕ್ಕಳು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ಮದುವೆ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸುತ್ತದೆ.ಇವುಗಳ ಜೊತೆಗೆ ಮಕ್ಕಳ ಹಕ್ಕು ರಕ್ಷಣೆಗಾಗಿಯೇ ಇರುವ ಆಯೋಗವು ಈ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸುತ್ತದೆ. ಅಗತ್ಯ ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.