ಸಿಇಒ ಹಠಾತ್‌ ಭೇಟಿ: ಪರಿಶೀಲನೆ

7

ಸಿಇಒ ಹಠಾತ್‌ ಭೇಟಿ: ಪರಿಶೀಲನೆ

Published:
Updated:

ಹುಕ್ಕೇರಿ: ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುಜರಿಗೆ ಹಾಕುವ ಸಾಮಾನುಗಳನ್ನು ನೋಡಿ ಉಗ್ರಾಣದ ಹಾಗೆ ಕಂಡು ಬಂದ ವಾತಾವರಣಕ್ಕೆ ಜಿ.ಪಂ. ಸಿಇಒ ದೀಪಾ ಚೋಳನ್ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದು­ಕೊಂಡ ಘಟನೆ ಶುಕ್ರವಾರ ತಾಲ್ಲೂಕಿನ ಸೋಲಾಪುರ ಗ್ರಾಮದಲ್ಲಿ ಜರುಗಿತು.ತಾಲ್ಲೂಕಿಗೆ ಹಠಾತ್ ಭೇಟಿ ನೀಡಿದ ದೀಪಾ ಚೋಳನ್ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಶುಕ್ರವಾರ ಸೋಲಾಪುರ ಗ್ರಾಮಕ್ಕೆ ಭೇಟಿಗೆ ಹೋದಾಗ ಪಿಡಿಒ ಇರದ ಬಗ್ಗೆ ವಿಚಾರಣೆ ನಡೆಸಿದರು. ಈ ಗ್ರಾಮಕ್ಕೆ ಕಳೆದ 10 ವರ್ಷದಿಂದ ಪಿಡಿಒಗಳು ಸರಿಯಾಗಿ ಬರ್ತಾ ಇಲ್ಲಾ ಎಂದು ಗ್ರಾ.ಪಂ. ಅಧ್ಯಕ್ಷ ಅಶೋಕ ಮಸಿ್ತ ಮತ್ತು ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಚನ್ನಪ್ಪ ಕೋರಿ ತಕರಾರು ಹೇಳಿದರು.ಇದಕ್ಕೆ ಪ್ರತಿಕ್ರಯಿಸಿದ ಇಒ ಎ.ಬಿ. ಪಟ್ಟಣಶೆಟ್ಟಿ ಮತ್ತು ಜಿ.ಪಂ. ಎಇಇ ಎಸ್.ಪಿ. ಪಾಟೀಲ ‘ಇಲ್ಲಿ ಸಾರ್ವಜನಿಕರ ಮಾಹಿತಿ ಹಕ್ಕಿನ ಕಿರಿಕಿರಿ ಇರುವುದರಿಂದ ಯಾರು ಬರಲು ಹಿಂಜರಿಯುತ್ತಾರೆ’ ಎಂದು ಸಿಇಒಗೆ ತಿಳಿಸಿದರು. ಗಾ್ರಮದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯ­ಬೇಕಾದಲ್ಲಿ ಜನರ ಸಹಕಾರ ಅವಶ್ಯ. ಕೇವಲ ಅಧಿಕಾರಿಗಳಿಂದ ಕೆಲಸ ಆಗು­ವುದಿಲ್ಲ. ಹಾಗಾಗಿ ಬಂದವರಿಗೆ ಸಹಕಾರ ನೀಡಲು ಜನರಿಗೆ ತಿಳಿಸಿದರು. ನಾಳೆಯೆ ಪಿಡಿಒ ಸಾವಿತಿ್ರ ಬಾ್ಯಕೋಡಗೆ ವರದಿ ಮಾಡಿಕೊಳ್ಳಲು ಸೂಚನೆ ನೀಡುವಂತೆ ತಾ.ಪಂ. ಇಒಗೆ ಹೇಳಿದರು. ಒಂದು ವೇಳೆ ವರದಿ ಮಾಡಿಕೊಳ್ಳದಿದ್ದರೆ ಅಮಾನತ್ತು ಮಾಡುವುದಾಗಿಯೂ ಎಚ್ಚರಿಸಿದರು.ಕಚೇರಿಯಲ್ಲಿನ ಗುಜರಿ ಸಾಮಾನು ಬೇಗನೆ ಕಾನೂನು ಪ್ರಕಾರ ಹರಾಜು ಮಾಡುವಂತೆ ಕಾರ್ಯದರ್ಶಿ ಯಾಸಿನ್ ಅವರಿಗೆ ಸೂಚಿಸಿದ ಅವರು ನರೇಗಾ ಕಿ್ರಯಾ ಯೋಜನೆ, ನಿರ್ಮಲ ಭಾರತ ಯೋಜನೆ ಅಡಿ 200 ಶೌಚಾಲಯ ಮತ್ತು ಬಸವ ಯೋಜನೆ ಅಡಿ 20 ಮನೆ ನಿರ್ಮಾಣ ಮಾಡಲು ಯೋಜನೆ ತಯಾರಿಸುವಂತೆ ಹೇಳಿದರು.ಭೇಟಿ: ಗ್ರಾಮದ ಉರ್ದು ಶಾಲೆ, ಕನ್ನಡ ಮತ್ತು ಮರಾಠಿ ಶಾಲೆಗಳ ಪರಿಸ್ಥಿತಿಯನ್ನು ಅವಲೋಕಿಸಿದ ಅವರು ಶಾಲೆಯ ಮುಂದಿನ ಆಟದ ಮೈದಾನದಲ್ಲಿ ರಾಡಿ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳಿಗೆ ಸಿಗುವ ಸೌಲಭ್ಯ ಮತ್ತು ಶೌಚಾಲಯ ವೀಕ್ಷಣೆ ಮಾಡಿದರು. ಶಾಲೆಯ ಪಕ್ಕಕ್ಕೆ ಸಾರ್ವಜನಿಕ ವಾಹನ ನಿಲ್ಲುವುದನ್ನು ಗಮನಿಸಿದ ಅವರು ಇದರಿಂದ ಕಲಿಸಲು ತೊಂದರೆ ಆಗು­ವುದಿ­ಲ್ಲವೆ ಎಂದು ಮುಖ್ಯೋಪಾ­ಧ್ಯಯರನ್ನು ಕೇಳಿದರು. ಮಕ್ಕಳು ಆಟ ಆಡುವುದೆಲ್ಲಿ ಎಂದು ಕೇಳಿ ಮೈದಾನವನ್ನು ಸ್ವಚ್ಚಾವಾಗಿ ಇಡಲು ಸೂಚಿಸಿದರು.ಕನ್ನಡ ಶಾಲೆ ಮತ್ತು ಮರಾಠಿ ಶಾಲೆಗೆ ಭೇಟಿ ನಿಡಿದಾಗಲೂ ಆಟದ ಮೈದಾನದ ಪರಿಸಿ್ಥತಿ ಭಿನ್ನವಾಗಿರಲಿಲ್ಲ.  ಎರಡು ಶಾಲೆಗಳ ಅಡುಗೆ ಕೋಣೆಗೆ ಹೋಗಿ ಹಾಲಿನ ಪುಡಿ, ಅಕ್ಕಿ ಮತ್ತು ಕಾಯಿಪಲ್ಲೆ ಪರೀಕಿ್ಷಿಸಿದರು. ಕುಡಿಯುವ ನೀರಿನ ಬಗ್ಗೆ ಹೆಚ್ಚು ಕಾಳಜಿ  ವಹಿಸಲು ಹೇಳಿ ಮಕ್ಕಳಿಗೆ ಕೂಡಿಸಿ ಊಟ ಬಡಿಸಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.ಜಿ.ಪಂ. ಎಇಇ ಎಸ್.ಪಿ. ಪಾಟೀಲ, ತಾ.ಪಂ. ಇಒ ಎ.ಬಿ. ಪಟ್ಟಣಶೆಟ್ಟಿ, ನರೇಗಾ ಸಹಾಯಕ ನಿರ್ದೇಶಕ ಎ.ಡಿ. ಜಕ್ಕಪ್ಪಗೋಳ, ಸಂಯೋಜಕ ಶಿರಗುಪ್ಪಿ, ಸಿಡಿಪಿಒ ಎಂ.ಎಸ್. ರೊಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry