ಭಾನುವಾರ, ಮೇ 22, 2022
22 °C

ಸಿ.ಇ.ಟಿ ಅಂಕಗಳನ್ನು ಮಾತ್ರ ಪರಿಗಣಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಾಗಿ ನಡೆಸಲ್ಪಡುವ ಈಗಿನ ಸಿ.ಇ.ಟಿ ಪದ್ಧತಿ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವನ್ನುಂಟು ಮಾಡುತ್ತಿದೆ.ಯಾಕೆಂದರೆ ಈ ಪದ್ಧತಿಯಲ್ಲಿ ಸಿ.ಇ.ಟಿ ಯಲ್ಲಿ ಪಡೆದ ಅಂಕಗಳನ್ನು ಹೊರತುಪಡಿಸಿ ಬಿ.ಎಡ್‌ನಲ್ಲಿ ಗಳಿಸಿದ ಶೇ.20 ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತಿದೆ. ಇದರಿಂದಾಗಿ ಹಲವಾರು ವಿದ್ಯಾರ್ಥಿಗಳಿಗೆ ಈ ವಿಷಯದಲ್ಲಿ ಅನ್ಯಾಯ ಉಂಟಾಗುತ್ತಿದೆ.ರಾಜ್ಯದಲ್ಲಿ ಹತ್ತಾರು ವಿಶ್ವವಿದ್ಯಾಲಯಗಳು ಬಿ.ಎಡ್ ಪದವಿ ನೀಡುತ್ತಿದ್ದು ಅವುಗಳಲ್ಲಿಯ ಪಠ್ಯಕ್ರಮ ಮತ್ತು ಮೌಲ್ಯಮಾಪನ ಪದ್ಧತಿ ಬೇರೆ ಬೇರೆಯಾಗಿದೆ. ಕೆಲವೊಂದು ಕಡೆ ಸೆಮೆಸ್ಟರ್ ಪರೀಕ್ಷೆ ಇದ್ದರೆ, ಮತ್ತೆ ಕೆಲವು ಕಡೆ ನಾನ್ ಸೆಮೆಸ್ಟರ್ ಪರೀಕ್ಷೆಗಳಿವೆ.ಇದರಿಂದಾಗಿ ಕೆಲವೊಂದು ಕಡೆ ಅಂಕಗಳು ಜಾಸ್ತಿಯಾಗಿರುತ್ತವೆ. ಅದಲ್ಲದೆ ಬಾಹ್ಯವಾಗಿ ಬಿ.ಎಡ್ ಪರೀಕ್ಷೆ ಬರೆಯುವವರಿಗೆ ಕೈ ಬಿಟ್ಟು ಅಂಕಗಳನ್ನು ನೀಡಲಾಗುತ್ತದೆ. ಇದರಿಂದ ಅಂತಹ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ, ರೆಗ್ಯುಲರ್ ಬಿ.ಎಡ್ ಮಾಡುವವರಿಗೆ ಅನ್ಯಾಯ ಉಂಟಾಗುತ್ತದೆ.ಆದ್ದರಿಂದ ನೇಮಕಾತಿಗೆ ಸಿ.ಇ.ಟಿ ಅಂಕಗಳನ್ನು ಮಾತ್ರ ಪರೀಗಣಿಸಬೇಕು ಎಂಬುದು ಬಹಳಷ್ಟು ವಿದ್ಯಾರ್ಥಿಗಳ ಕೂಗು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.