ಸಿಇಟಿ-ಕಾಮೆಡ್-ಕೆ ಆಕಾಂಕ್ಷಿಗಳಿಗೆ ಪ್ರಜಾವಾಣಿ ದಿಕ್ಸೂಚಿ:ನಾಳೆ ಕೌನ್ಸೆಲಿಂಗ್ ಪೂರ್ವ ಕಾರ್ಯಾಗಾರ

7

ಸಿಇಟಿ-ಕಾಮೆಡ್-ಕೆ ಆಕಾಂಕ್ಷಿಗಳಿಗೆ ಪ್ರಜಾವಾಣಿ ದಿಕ್ಸೂಚಿ:ನಾಳೆ ಕೌನ್ಸೆಲಿಂಗ್ ಪೂರ್ವ ಕಾರ್ಯಾಗಾರ

Published:
Updated:

ಶಿವಮೊಗ್ಗ: ಸಿಇಟಿ, ಕಾಮೆಡ್-ಕೆ ಕೌನ್ಸೆಲಿಂಗ್‌ಗೆ ಹಾಜರಾಗಲಿರುವ ಶಿವಮೊಗ್ಗ ವಿಭಾಗದ ಆಕಾಂಕ್ಷಿಗಳ ನೆರವಿಗೆ `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಸಮೂಹ ಧಾವಿಸಿದ್ದು, ಅಭ್ಯರ್ಥಿಗಳ ಎಲ್ಲ ಬಗೆಯ ಸಂದೇಹಗಳಿಗೂ ಪರಿಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಿದೆ.`ಪ್ರಜಾವಾಣಿ~ ಬಳಗ ಬೆಂಗಳೂರಿನ  ಆಚಾರ್ಯ ತಾಂತ್ರಿಕ ಕಾಲೇಜು ಸಹಯೋಗದಲ್ಲಿ ಇದೇ 31ರಂದು ಬೆಳಿಗ್ಗೆ 9.30ಕ್ಕೆ ಕುವೆಂಪು ರಂಗಮಂದಿರದ ಬಳಿ ಇರುವ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಆವರಣದ ಚಂದನ ಸಭಾಂಗಣದಲ್ಲಿ ಕೌನ್ಸೆಲಿಂಗ್ ಪೂರ್ವ ಕಾರ್ಯಾಗಾರ ಹಮ್ಮಿಕೊಂಡಿದೆ.  ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಸಂಪನ್ಮೂಲ ವ್ಯಕ್ತಿಗಳಾಗಿ ದಾವಣಗೆರೆ ಬಿಐಇಟಿ ನಿರ್ದೇಶಕ ವೃಷಭೇಂದ್ರಪ್ಪ (ತಾಂತ್ರಿಕ ಶಿಕ್ಷಣ), ದಾವಣಗೆರೆ ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಮೈಕ್ರೋ ಬಯಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎ.ಎಲ್. ಜಯಸಿಂಹ (ವೈದ್ಯಕೀಯ ಶಿಕ್ಷಣ), ಸಿಇಟಿ ಮತ್ತು ಕಾಮೆಡ್-ಕೆ ಅಧಿಕಾರಿಗಳೂ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ವಿವರವಾದ ಮಾಹಿತಿ ನೀಡಲಿದ್ದಾರೆ.ಸಿಇಟಿ ಮತ್ತು ಕಾಮೆಡ್-ಕೆ ಕೌನ್ಸೆಲಿಂಗ್ ಎದುರಿಸುವ ಅಭ್ಯರ್ಥಿಗಳಿಗೆ ಈ ಕಾರ್ಯಾಗಾರ ದಾರಿದೀಪವಾಗಿ ಪರಿಣಮಿಸಲಿದ್ದು, ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು? ಎಂತಹ ಕಾಲೇಜಿಗೆ ಒಲವು ತೋರಬೇಕು? ಕೌನ್ಸೆಲಿಂಗ್‌ಗೆ ಹೋಗುವಾಗ ಏನೆಲ್ಲ ಸಿದ್ಧತೆ ಮಾಡಿಕೊಂಡಿರಬೇಕು? -ಇವೇ ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ. ಕಾರ್ಯಾಗಾರಕ್ಕೆ ಉಚಿತ ಪ್ರವೇಶವಿದ್ದು, ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

 

ವಿವರಗಳಿಗೆ ಮೊಬೈಲ್: 94481 59346 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry