ಶನಿವಾರ, ಜನವರಿ 18, 2020
26 °C

ಸಿಇಟಿ ಕಾಯ್ದೆ ವಿರೋಧಿಸಿ ಎಬಿವಿಪಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜ್ಯ ಸರ್ಕಾರ 2006ರ ಸಿಇಟಿ ಕಾಯ್ದೆ ಜಾರಿಗೆ ತರಲು ನಿರ್ಧ­ರಿಸಿ­ರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ವಿವಿಧ ಕಾಲೇಜುಗಳಿಂದ ಬಂದು ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿ­ಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಕೃತಿ ಸುಟ್ಟರು. ನಂತರ ತಹಶೀ­ಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಸರ್ಕಾರದ ನಿರ್ಧಾರದಿಂದ ಪ್ರತಿಭಾ­ವಂತ ಬಡ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣದಿಂದ ವಂಚಿತರಾಲಿದ್ದಾರೆ. ದುರ್ಬಲ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗದ ಮತ್ತು ಅವರ ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸುವ ಸರ್ಕಾರದ ನೀತಿ ಖಂಡನೀಯ ಎಂದು ಮನವಿಯಲ್ಲಿ ಹೇಳಲಾಗಿದೆ.ಹೊಸ ಕಾಯ್ದೆ ಅನುಷ್ಠಾನ­ಗೊಂಡರೆ ಈಗ ಸರ್ಕಾರಿ ಕೋಟಾದಲ್ಲಿ­ರುವ ಎಂಜಿನಿಯರಿಂಗ್‌ನ 45 ಶೇಕಡಾ. ವೈದ್ಯಕೀಯದ 40 ಶೇಕಡಾ ಮತ್ತು ದಂತ ವೈದ್ಯಕೀಯದ 35 ಶೇಕಡಾ ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿವೆ. ಖಾಸಗಿ ಅನು­ದಾನಿತ ಕಾಲೇಜುಗಳಲ್ಲಂತೂ ಒಂದು ಸರ್ಕಾರಿ ಸೀಟು ಕೂಡ ಇಲ್ಲದಂತಾ­ಗಲಿದೆ.ಈಗಾಗಲೇ ಸಾಕಷ್ಟು ದೂರು­ಗಳು ಕೇಳಿಬಂದಿರುವ ಕಾಮೆಡ್‌–ಕೆಗೆ ಉಳಿದ ಸೀಟುಗಳಿಗೂ ಪರೀಕ್ಷೆ ನಡೆಸಲು ಸರ್ಕಾರ ಅನುಮತಿ ನೀಡುವು­ದರಿಂದ ಅನೇಕ ಸಮಸ್ಯೆಗಳು ಸೃಷ್ಟಿಯಾಗಲಿವೆ. ಖಾಸಗಿ ಸಂಸ್ಥೆಗಳಿಗೆ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ದೂರಲಾಗಿದೆ.ವಿದ್ಯಾರ್ಥಿ ವಿರೋಧಿಯಾದ ಈ ನೀತಿಯನ್ನು ಜಾರಿಗೊಳಿಸುವುದರಿಂದ ಸರ್ಕಾರ ತಕ್ಷಣ ಹಿಂದೆ

ಸರಿಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಕ್ರಿಯಿಸಿ (+)