ಸೋಮವಾರ, ಜನವರಿ 27, 2020
21 °C

ಸಿಇಟಿ ನೀತಿ ಖಂಡಿಸಿ ಎಬಿವಿಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಇಟಿ ನೀತಿ ಖಂಡಿಸಿ ಎಬಿವಿಪಿ ಪ್ರತಿಭಟನೆ

ಅಫಜಲಪುರ: 2006ರ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ(ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಯನ್ನು ಸರ್ಕಾರ ರದ್ದು ಪಡಿಸ­ಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಅಫಜಲಪುರ  ತಾಲ್ಲೂಕು ಘಟಕ ಶುಕ್ರವಾರ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿತು.ಪರಿಷತ್ ಸಂಚಾಲಕರಾದ ರಾಜ­ಶೇಖರ ಬಡದಾಳ, ಭೀಮರಾವ್‌ ಆಲಮೇಲ ಮಾತನಾಡಿ, ‘2006ರ ಸಿಇಟಿ ಕಾಯಿದೆ ಜಾರಿ ಮಾಡುವು­ದರಿಂದ ದುರ್ಬಲ ವರ್ಗಗಳಿಗೆ ಸಾಮಾ­ಜಿಕ ನ್ಯಾಯ ಒದಗಿಸಲಾಗದು ಮತ್ತು ಅವರ ಶೈಕ್ಷಣಿಕ ಹಕ್ಕನ್ನು ಮೊಡಕು­ಗೊಳಿ­ಸಿದಂತೆ ಆಗುತ್ತದೆ’ ಎಂದು ಆರೋಪಿಸಿದರು.‘ಈ ಕಾಯ್ದೆಯಿಂದಾಗಿ ಪ್ರಸ್ತುತ ಸರ್ಕಾರಿ ಕೋಟಾದಲ್ಲಿದ್ದ ಎಂಜಿನಿಯ­ರಿಂಗ್‌ನ ಶೇ 45, ಮೆಡಿಕಲ್‌ನ ಶೇ 40, ದಂತ ವೈದ್ಯಕೀಯದ ಶೇ 35, ಸೀಟು­ಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾ­ಗುತ್ತವೆ. ಖಾಸಗಿ ಅನುದಾನ ರಹಿತ ಕಾಲೇಜ್‌ನಲ್ಲಿ ಒಂದೂ ಸರ್ಕಾರಿ ಕೋಟಾ ಸೀಟುಗಳು ಇಲ್ಲದಂತಾಗು-­ವುದು. ತನ್ನ ಪಾಲಿನ ಸೀಟುಗಳಿಗಾಗಿ ಕಾಮೆಡ್‌ – ಕೆ ನಡೆಸುವ ಪ್ರವೇಶ ಪರೀಕ್ಷೆಯ ಬಗ್ಗೆಹಲವಾರು ದೂರು­ಗಳಿವೆ. ಈಗ ಸರ್ಕಾರ ಉಳಿದ ಸೀಟು­ಗಳಿಗೂ ಪರೀಕ್ಷೆ ನಡೆಸಲು ಕಾಮೆಡ್‌ – ಕೆಗೆ ಬಿಟ್ಟು ಕೊಡುತ್ತಿರುವದು ಖಂಡ­ನೀಯ’ ಎಂದು ಅವರು ಹೇಳಿದರು.  ಸುಮಾರು ಒಂದು ಗಂಟೆ ಕಾಲ ಎಬಿವಿಪಿ ಕಾರ್ಯಕರ್ತರು ಅಂಬೇಡ್ಕರ ವೃತ್ತದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಮಂಜುನಾಥ, ಬಿಂದುಕುಮಾರ, ಸೋಮಯ್ಯ ಹಿರೇಮಠ ಮತ್ತಿತರು ಇದ್ದರು.ಸೇಡಂ ವರದಿ

ವೃತ್ತಿ ಶಿಕ್ಷಣ ಪ್ರವೇಶಾತಿಗಾಗಿ ನೂತನ­ವಾಗಿ ಜಾರಿಮಾಡಲು ಯೋಜಿ­ಸಿ­ರುವ 2006ರ ಕಾಯ್ದೆಯನ್ನು ಕೈ ಬಿಡು­ವಂತೆ ಒತ್ತಾಯಿಸಿ ಅಖಿಲ ಭಾರ­ತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.  ಟೈರ್‌ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಎಬಿವಿಪಿಯ ಕಾರ್ಯಕರ್ತ ಪ್ರದೀಪ್ ಮಟಗೂಡ್ಡ, ‘2006ರ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು. ಏಕೆಂದರೆ ಇದರಿಂದ ರಾಜ್ಯದ ಖಾಸಗಿಯವರು ನಡೆಸುವ  ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಸರಕಾರಿ ಸೀಟು­ಗಳು ಇರುವುದಿಲ್ಲ. ಕಡಿಮೆ ಶುಲ್ಕ ಸೀಟು­­­ಗಳು ಸಿಗುವುದು ಕಷ್ಟವಾಗುತ್ತದೆ’ ಎಂದರು.ತಾಲೂಕು ಸಂಚಾಲಕ ಶಿವಕುಮಾರ ನಿಡಗುಂದಾ, ಸಹ ಸಂಚಾಲಕ ಮಂಜುನಾಥ ಪಂಚಾಳ, ನಗರ ಕಾರ್ಯದರ್ಶಿ ನಾಗರಾಜ ಪಾಟೀಲ, ಪವನ ದೇಶಪಾಂಡೆ, ಮಧುಸೂಧನ ರೆಡ್ಡಿ, ಆನಂದ ಪವಾರ, ಸುನೀಲ­ಕುಮಾರ, ಜಗ್ಗೇಶ, ಶೀಲಸಾಗರ, ಬಸವ­ರಾಜ, ಸಂಗು ಹತ್ತಿ, ಅಣ್ಣಾರಾವ ಪೊಲೀಸ್ ಪಾಟೀಲ, ವಿರೇಶ ನಿಲಂಗಿ ಹಾಗೂ ಮಾತೃಛಾಯಾ ಕಾಲೇಜು ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)