ಗುರುವಾರ , ಮೇ 6, 2021
33 °C

ಸಿಇಟಿ: ಪ್ರವೇಶಪ್ರಕ್ರಿಯೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಿಇಟಿಯಲ್ಲಿ ವಿವಿಧ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳು ವೃತ್ತಿಪರ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ನಡೆಸುವ ಮೂಲ ದಾಖಲೆಗಳ ಪರಿಶೀಲನೆಗೆ ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಬುಧವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಪಲ್ಲವಿ ಆಕುರಾತಿ, `ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಮಾಡಿರುವ ಫಲಿತಾಂಶ ಸಾಧನೆಯನ್ನೆ ವೃತ್ತಿಪರ ಕೋರ್ಸ್‌ಗಳಲ್ಲೂ ಮುಂದುವರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದರು.ಮೂಲ ದಾಖಲಾತಿಗಳ ಪರಿಶೀಲನೆಯ ಮೊದಲ ಅಭ್ಯರ್ಥಿ, ಎಂಜಿನಿಯರಿಂಗ್‌ನಲ್ಲಿ 69ನೇ ರ‌್ಯಾಂಕ್ ಪಡೆದ ಎಸ್‌ಬಿಆರ್ ವಸತಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಪಾಯಲ್ ಜೆ. ಮಂತ್ರಿ ಅವರಿದ್ದರು.ನಗರದ ರಾಜಾಪುರ ಸಮೀಪದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಮೂಲ ದಾಖಲೆಗಳ ಪರಿಶೀಲನೆ ಜೂ. 5ರಿಂದ ಆರಂಭವಾಗಿ ಜೂ. 23ರ ವರೆಗೂ ಮುಂದುವರಿಯಲಿದೆ.ಜೂ. 5ರಂದು 1ರಿಂದ 2,000ರೊಳಗೆ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳ ಮೂಲ ದಾಖಲಾತಿಗಳ ಪರೀಶಿಲನೆ ನಡೆಯಿತು. ಪ್ರತಿದಿನ ಒಟ್ಟು ನಾಲ್ಕು ಅವಧಿಯಲ್ಲಿ ದಾಖಲಾತಿ ಪರೀಶಿಲನೆ ನಡೆಯಲಿದೆ. ಬೆಳಿಗ್ಗೆ 9ರಿಂದ 11, 11.15ರಿಂದ ಮಧ್ಯಾಹ್ನ 1.15 , ಮಧ್ಯಾಹ್ನ 2, ಸಂಜೆ 4, ಹಾಗೂ ಸಂಜೆ 4.15ರಿಂದ 6.15. ಸಮಯ ನಗದಿ ಪಡಿಸಲಾಗಿದೆ. ನಿಗದಿತ ಸಮಯಕ್ಕೆ ಒಂದು ತಾಸು ಮೊದಲು ಸ್ಥಳದಲ್ಲಿ ವಿದ್ಯಾರ್ಥಿಗಳು ಹಾಜರಿರುವಂತೆ ಸೂಚಿಸಲಾಗಿದೆ.ಮೂಲ ದಾಖಲೆಗಳ ಪರಿಶೀಲನೆಯ ನಂತರ ಎಲ್ಲ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಾಸ್‌ವರ್ಡ್ ಒದಗಿಸಲಾಗುತ್ತದೆ. ಈ ಪಾಸ್‌ವರ್ಡ್ ಬಳಸಿ ಇಂಟರ್‌ನೆಟ್ ಮೂಲಕ ಕಾಲೇಜು ಹಾಗೂ ಸ್ಥಳ ಆಯ್ಕೆ ಮಾಡಿಕೊಳ್ಳುವುದಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.ಪಿಯು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಂ. ಸಾಳುಂಕೆ, ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಚ್. ಯೆಲಿಮನಿ, ಗುಲ್ಬರ್ಗ ಸಹಾಯ ಕೇಂದ್ರದ ಮುಖ್ಯ ನೋಡಲ್ ಅಧಿಕಾರಿ ಕೆ.ಎಂ. ಮುಗಳಿ, ಸಹಾಯಕ ನೋಡಲ್ ಅಧಿಕಾರಿ ಸಂಗೀತಾ ಕಟ್ಟಿಮನಿ ಹಾಜರಿದ್ದರು.ಹೆಚ್ಚಿನ ಮಾಹಿತಿಗೆ ಮುಖ್ಯ ನೋಡಲ್ ಅಧಿಕಾರಿ ಮೊ. 94487 15978, ಸಹಾಯಕ ನೋಡಲ್ ಅಧಿಕಾರಿ ಮೊ. 98451 25933 ಸಂಖ್ಯೆಗಳಿಗೆ ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.