ಸಿಇಟಿ: ವಿದ್ಯಾರ್ಥಿಗಳಿಗೆ ಉಚಿತ ಮಾಹಿತಿ

7

ಸಿಇಟಿ: ವಿದ್ಯಾರ್ಥಿಗಳಿಗೆ ಉಚಿತ ಮಾಹಿತಿ

Published:
Updated:

ಬೆಂಗಳೂರು: ಐಪೊಮೊ ಸಂಸ್ಥೆಯು ಪಿಇಎಸ್‌ ವಿಶ್ವವಿ­ದ್ಯಾಲಯ, ವಿದ್ಯಾ ಪೋಷಕ್‌ ಹಾಗೂ ಬೇಸ್‌ ಕೋಚಿಂಗ್‌ ಸಂಸ್ಥೆಯ ಆಶ್ರಯದಲ್ಲಿ ಸಿಇಟಿ, ಕಾಮೆಡ್‌ ಕೆ, ಪೆಸ್ಸಾಟ್‌ ವ್ಯಾಸಂಗ ಮಾಡಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಮೊಬೈಲ್‌ ಮೂಲಕ ಉಚಿತ ಪರೀಕ್ಷೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು  ರಾಜ್ಯದಾದ್ಯಂತ ಹಮ್ಮಿಕೊಂಡಿದೆ.ದ್ವಿತೀಯ ಪಿಯುಸಿ (ವಿಜ್ಞಾನ) ಕಲಿ­ಯು­ತ್ತಿರುವ ವಿದ್ಯಾರ್ಥಿಗಳು ಭಾಗವಹಿ­ಸ­ಬಹುದು. ರಾಜ್ಯದಾದ್ಯಂತ 10,000 ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದ ಸಮಗ್ರ ಮಾಹಿತಿಗೆ 8139999903 ಕರೆ ಮಾಡಬಹುದು.ಇದೇ 5ರಂದು ಬೆಂಗಳೂರಿನ ಪಿಇಎಸ್­ಐಟಿ ಕ್ಯಾಂಪಸ್‌­ನಲ್ಲಿ, 12ರಂದು ಮಂಗಳೂರಿನ ಎಸ್‌ಡಿಎಂ ಪಿಜಿ ಸೆಂಟರ್‌­ನಲ್ಲಿ, 14ರಂದು ಶಿವಮೊಗ್ಗದ ಡಿವಿಎಸ್ ಪದವಿಪೂರ್ವ ಕಾಲೇಜು, ಫೆ.2ರಂದು ಮೈಸೂರಿನ ಮಹಾರಾಜ ಕಾಲೇಜಿ­ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry