ಸಿಇಸಿ ಪತ್ರಕ್ಕೆ ತಡಕಾಟ!

7

ಸಿಇಸಿ ಪತ್ರಕ್ಕೆ ತಡಕಾಟ!

Published:
Updated:

ಬೆಂಗಳೂರು: ಮೂವರು ಮಾಜಿ ಮುಖ್ಯಮಂತ್ರಿಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತಂತೆ ಮಾಹಿತಿ ಬಯಸಿ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸರ್ಕಾರಕ್ಕೆ ಬರೆದಿರುವ ಪತ್ರವು `ಕಣ್ಮರೆ~ಯಾಗಿರುವ ಕುತೂಹಲ ಅಂಶ ಈಗ ಬೆಳಕಿಗೆ ಬಂದಿದೆ.ಎಸ್.ಎಂ.ಕೃಷ್ಣ, ಧರ್ಮಸಿಂಗ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಿಇಸಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಇಸಿ, ಇದೇ ತಿಂಗಳ 3ರಂದು ಸರ್ಕಾರಕ್ಕೆ ಪತ್ರ ಬರೆದು, ಇವರ ಅವಧಿಯಲ್ಲಿ ಅಕ್ರಮಗಳ ಪೂರ್ಣ ಮಾಹಿತಿ ಕೋರಿತ್ತು. ಸಿಇಸಿಯ ಸದಸ್ಯ ಕಾರ್ಯದರ್ಶಿಗಳ ಸಹಿ ಇದ್ದ ಪತ್ರ ಇದಾಗಿತ್ತು.ಆದರೆ, ಸಚಿವ ಬಸವರಾಜ ಬೊಮ್ಮಾಯಿ ಈ ಪತ್ರವನ್ನು ತೋರಿಸಲು ಮುಖ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿನ ಅಧಿಕಾರಿಗಳನ್ನು ಕೇಳಿದಾಗ, ಅವರು ಪತ್ರಕ್ಕಾಗಿ ತಡಕಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.ಅಧಿಕಾರಿಗಳಿಗೆ ಪತ್ರದ ಅರಿವೇ ಇರಲಿಲ್ಲ. ಕೊನೆಗೆ ಸಚಿವ ಸುರೇಶ್ ಕುಮಾರ್ ಈ ಪತ್ರವನ್ನು ಅಬ್ರಹಾಂ ಅವರಿಂದಲೇ ಶನಿವಾರ ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ.ಜೆಡಿಎಸ್ ಜೊತೆ ಶಾಮೀಲು?:  ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತ ಮಾಹಿತಿ ಮುಚ್ಚಿ ಹಾಕಲು ಬಿಜೆಪಿ ಸರ್ಕಾರದಲ್ಲಿನ ಕೆಲವು ವ್ಯಕ್ತಿಗಳು ಹುನ್ನಾರ ನಡೆಸುತ್ತಿದ್ದಾರೆ ಎಂಬ ಗುಮಾನಿ ಕೂಡ ಈ ಸಂದರ್ಭದಲ್ಲಿ ವ್ಯಕ್ತವಾಗಿದೆ.ಜೆಡಿಎಸ್ ಬೆಂಬಲಿಸುವವರು ಬಿಜೆಪಿ ಸರ್ಕಾರದಲ್ಲಿ ಇದ್ದಾರೆ ಎನ್ನುವ ಅನುಮಾನ ಬಿಜೆಪಿ ವಲಯದಲ್ಲಿ ವ್ಯಕ್ತವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry