ಸಿಇಸಿ ಶಿಫಾರಸು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ: ಲಾಡ್

7

ಸಿಇಸಿ ಶಿಫಾರಸು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ: ಲಾಡ್

Published:
Updated:

ಹೊಸಪೇಟೆ: `ಅಕ್ರಮ ಗಣಿಗಾರಿಕೆ ನಿಯಂತ್ರಣ ಮಾಡುವ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಉನ್ನತಾಧಿಕಾರ ಸಮಿತಿ (ಸಿಇಸಿ) ನೀಡಿರುವ ಶಿಫಾರಸುಗಳು ಅವೈಜ್ಞಾನಿಕ. ಗಣಿ ಕಂಪೆನಿಗಳ ಮಾಲೀಕರು ಇಂತಹ ಕ್ರಮದ ವಿರುದ್ಧ ಕಾನೂನು ಮೊರೆ ಹೋಗುತ್ತೇವೆ~ ಎಂದು ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಮಂಗಳವಾರ ಇಲ್ಲಿ ಪ್ರತಿಕ್ರಿಯಿಸಿದರು.`ನಿಯಮಬಾಹಿರವಾಗಿ ಗಣಿಗಾರಿಕೆ ನಡೆಸುವ ಮೂಲಕ ನಿಸರ್ಗವನ್ನು ನಾಶ ಮಾಡಲಾಗಿದೆ. ಅಲ್ಲದೇ ಅಕ್ರಮ ಗಣಿಗಾರಿಕೆಯಿಂದಾಗಿ ರಾಜ್ಯದ ಬೊಕ್ಕಸಕ್ಕೂ ಹಾನಿಯಾಗಿದೆ. ಈ ಅಂಶಗಳನ್ನು ಗುರುತಿಸುವ ಹಾಗೂ ನಿಯಂತ್ರಿಸುವ ಬದಲು, ಅಕ್ರಮಕ್ಕೆ ಅವೈಜ್ಞಾನಿಕ ದಂಡ ಹೇರಿ, ಅಕ್ರಮವನ್ನು ಸಕ್ರಮ ಮಾಡುವ ವಿಧಾನವನ್ನು ತಿಳಿಸಿ ಸಿಇಸಿಯೇ ಅಕ್ರಮಕ್ಕೆ ಪ್ರೇರಣೆಯಾಗು ವಂತಹ ವರದಿ ನೀಡಿದೆ~ ಎಂದು ಸಿಇಸಿ ಸಲ್ಲಿಸಿರುವ ವರದಿ ಹಾಗೂ ಶಿಫಾರಸು ಗಳ ವಿರುದ್ಧ ಕಿಡಿ ಕಾರಿದರು.ಗಣಿಗಾರಿಕೆಯಿಂದ ಕೆಲವರು ಭಾರಿ ಪ್ರಮಾಣದಲ್ಲಿ ಸಂಪತ್ತು ಪಡೆದಿದ್ದಾರೆ. ಮತ್ತೆ ಕೆಲವರು ಏನೂ ದೊರೆಯದೆ ಹಾನಿ ಅನುಭವಿಸಿದ್ದಾರೆ. ಅವರ ಪ್ರಮಾಣಕ್ಕೆ ಮತ್ತು ವ್ಯಾಪ್ತಿಗೆ ಅನುಗುಣ ವಾಗಿ ದಂಡ ಹಾಕಿದ್ದರೆ ಸರಿಯಾಗುತ್ತಿತ್ತು ಎಂದು ಹೇಳಿದರು.`ಸಿಇಸಿ ಶಿಫಾರಸು ಇಷ್ಟೇ ಇದ್ದರೆ ಕಳೆದೆರಡು ವರ್ಷಗಳ ಹಿಂದೆಯೇ ದಂಡ ಕಟ್ಟಿ ಗಣಿಗಾರಿಕೆ ಆರಂಭಿಸಬಹು ದಾಗಿತ್ತು. ವೃಥಾ ಸಮಯ ಹಾಳು ಮಾಡಿ ಅವೈಜ್ಞಾನಿಕ ವರದಿ ನೀಡಿದೆ~ ಎಂದು ಲಾಡ್ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry