ಸಿ.ಎಂಗೆ ಕಪ್ಪುಬಾವುಟ ಪ್ರದರ್ಶಿಸಲು ನಿರ್ಧಾರ

7
13ರಂದು ಕೆಪಿಎಸ್‌ಸಿ ವಿರುದ್ಧ ಲೋಕಸತ್ತಾ ಪ್ರತಿಭಟನೆ

ಸಿ.ಎಂಗೆ ಕಪ್ಪುಬಾವುಟ ಪ್ರದರ್ಶಿಸಲು ನಿರ್ಧಾರ

Published:
Updated:

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕ­ಸೇವಾ ಆಯೋಗ ನಡೆಸಿದ ಪರೀಕ್ಷೆಯ ಅಕ್ರಮ­ದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳು­ವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲು ಲೋಕಸತ್ತಾ ಪಕ್ಷ ತೀರ್ಮಾನಿಸಿದೆ.ಈ ವಿಷಯದಲ್ಲಿ ಮಾಡುತ್ತಿರುವ ಹೋರಾಟಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಭ್ರಷ್ಟರನ್ನು ರಕ್ಷಿಸುವುದು ಕೂಡ ಭ್ರಷ್ಟಾ­ಚಾರ ಆಗುತ್ತದೆ ಎಂದು ಲೋಕಸತ್ತಾ ಪಕ್ಷದ ಪದಾಧಿ­ಕಾರಿ­ಗಳು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ಇದೇ 13ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸ­ಲಾಗು­ವುದು ಎಂದು ಪಕ್ಷದ ಕಾರ್ಯಕಾರಿಣಿ ಸದಸ್ಯೆ ಶಾಂತಲಾ ದಾಮ್ಲೆ, ಕಾರ್ಯದರ್ಶಿ ಸಿ.ಎನ್‌.ದೀಪಕ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry