ಸೋಮವಾರ, ಮೇ 17, 2021
28 °C

ಸಿಎಂಗೆ ಕಿರಿಕಿರಿ ತಂದ ಟಿವಿ ಮಾಧ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಟಿ.ವಿ. ಮಾಧ್ಯಮ ಪತ್ರಕರ್ತರು ಮೇಲಿಂದ ಮೇಲೆ ಮುಗಿಬಿದ್ದು ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳಿದ್ದರಿಂದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸ್ವಲ್ಪ ಸಿಟ್ಟಾದ ಘಟನೆ ಶುಕ್ರವಾರ ಇಲ್ಲಿ ನಡೆಯಿತು.

ತುಮಕೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯಮಂತ್ರಿಯನ್ನು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರು ಪ್ರಶ್ನಿಸುವಾಗ ಈ ಘಟನೆ ನಡೆಯಿತು.ತುಮಕೂರು ವಿ.ವಿ. ಲಾಂಛನ ಬದಲಾವಣೆ ಮಾಡಿರುವ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಮುಖ್ಯಮಂತ್ರಿ ಸ್ಪಷ್ಟ ಉತ್ತರ ನೀಡಲಿಲ್ಲ. ಆ ಸಂದರ್ಭದಲ್ಲಿ ಟಿ.ವಿ. ಮಾಧ್ಯಮ ಪ್ರತಿನಿಧಿಗಳು ಜೋರು ಧ್ವನಿಯಲ್ಲಿ ಪ್ರಶ್ನೆ ಕೇಳುತ್ತಾ ತಮ್ಮ ಛಾನಲ್ ಲೊಗೋವನ್ನು ಮುಖ್ಯಮಂತ್ರಿ ಮುಖದ ಮುಂದೆ ಹಿಡಿದರು.ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಸ್ವಲ್ಪ ಕೋಪ ಮಿಶ್ರಿತ ನಗು ಧ್ವನಿಯಲ್ಲಿ ಉಗ್ರರಂತೆ ಪ್ರಶ್ನೆ ಮಾಡ್ತೀರಲ್ಲ. ನಿಧಾನಕ್ಕೆ ಕೇಳಿ ಎಂದು ಹೇಳಿ ಅಲ್ಲಿಂದ ಕದಲಿದರು.ನಂತರ ನಡೆದ ಸಮಾರಂಭದ ಬಳಿಕವೂ ಸದಾನಂದಗೌಡ ಅವರನ್ನು ಪ್ರಶ್ನಿಸಲು ಟಿ.ವಿ. ಮಾಧ್ಯಮದವರು ಮುಂದಾದರು. ಮತ್ತೆ ಮಾತನಾಡಲು ಬಯಸಲಿಲ್ಲ. ಆಗ ಲೊಗೋ ಹಿಡಿದು ಮುಖ್ಯಮಂತ್ರಿಯನ್ನು ಅಡ್ಡಗಟ್ಟಿ ನಿಂತಾಗ ಮಧ್ಯಪ್ರವೇಶಿಸಿದ ಪೊಲೀಸರು ಟಿ.ವಿ. ಮಾಧ್ಯಮದವರನ್ನು ಸಭಾಂಗಣದ ಬಾಗಿಲವರೆಗೂ ತಳ್ಳಿದರು. ಪೊಲೀಸರು ಹಾಗೂ ಮಾಧ್ಯಮದವರ ನಡುವೆ ಮಾತಿನ ಚಕಮಕಿ ನಡೆಯಿತು.ಮುಖ್ಯಮಂತ್ರಿ ಕಾರು ಏರಿ ಹೊರಟಾಗಲೂ ಕಾರಿಗೆ ಅಡ್ಡ ಕುಳಿತ ಟಿ.ವಿ. ಮಾಧ್ಯಮದವರು ಪ್ರಶ್ನೆಗೆ ಉತ್ತರ ಕೊಟ್ಟು ಮುಂದೆ ಹೋಗುವಂತೆ ಪಟ್ಟುಹಿಡಿದರು. ಇದರಿಂದ ಕಂಗಾಲಾದ ಪೊಲೀಸರು ಕಾರಿಗೆ ಅಡ್ಡಲಾಗಿ ಕುಳಿತವರನ್ನು ಬಲವಂತದಿಂದ ಹೊರ ಹಾಕಿದರು.`ನಾನು ಮಾಧ್ಯಮದ ಮಿತ್ರ~ಬೆಂಗಳೂರು: ತುಮಕೂರಿನ ಸಮಾರಂಭದಲ್ಲಿ ಪ್ರಶ್ನೆ ಕೇಳಿ ಉತ್ತರಿಸಬೇಕು ಎಂದು ಪಟ್ಟುಹಿಡಿದ ಮಾಧ್ಯಮದವರನ್ನು ಪತ್ರಕರ್ತರನ್ನು ಭಯೋತ್ಪಾದಕರೆಂದು ಕರೆದಿದ್ದೀರಾ? ಎಂದು ಪತ್ರಕರ್ತರು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕೇಳಿದ ಪ್ರಶ್ನೆಗೆ, `ಪತ್ರಕರ್ತರನ್ನು ಭಯೋತ್ಪಾದಕರೆಂದು ನಾನು ಕರೆದಿಲ್ಲ. ನಾನು ಯಾವಾಗಲೂ ಮಾಧ್ಯಮ ಮಿತ್ರ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸ್ಪಷ್ಟನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.