ಭಾನುವಾರ, ಮಾರ್ಚ್ 7, 2021
19 °C
‘ಅಧಿಕಾರಿಯ ಕೆನ್ನೆಗೆ ಹೊಡೆದ’ ಪ್ರಕರಣಕ್ಕೆ ಹೊಸ ತಿರುವು

ಸಿ.ಎಂ ಕೈ ಮಾಡಿದ್ದು ಭದ್ರತಾ ಸಿಬ್ಬಂದಿ ಮೇಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿ.ಎಂ ಕೈ ಮಾಡಿದ್ದು ಭದ್ರತಾ ಸಿಬ್ಬಂದಿ ಮೇಲೆ!

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿನ ಪಾಲಿಕೆ ಆಯುಕ್ತ ಪಿ.ಜಿ.ರಮೇಶ್‌ ಅವರ ಕೆನ್ನೆಗೆ ಹೊಡೆದರು ಎಂಬ ಪ್ರಕರಣ ಹೊಸ ತಿರುವು ಪಡೆದಿದೆ.ನಗರದಲ್ಲಿ ಶನಿವಾರ ವಾಲ್ಮೀಕಿ ಭವನ ಉದ್ಘಾಟನೆ ಸಂದರ್ಭದಲ್ಲಿ ನಡೆದ ಈ ಘಟನೆಯನ್ನು ದಾಖಲಿಸಿರುವ ವಿಡಿಯೊ ತುಣುಕು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಅದರಲ್ಲಿ ಮುಖ್ಯಮಂತ್ರಿಯವರು ಭದ್ರತಾ ಸಿಬ್ಬಂದಿ ಮೇಲೆ ಕೈ ಮಾಡಿರುವಂತೆ ಕಾಣಿಸುತ್ತದೆ.ಪಾಲಿಕೆ ಸಿಬ್ಬಂದಿಯೊಬ್ಬರು ಚಿತ್ರೀಕರಿಸಿರುವ ದೃಶ್ಯಾವಳಿಯನ್ನು ರಮೇಶ್ ಸ್ಪಷ್ಟನೆಯೊಂದಿಗೆ ನೀಡಿದ್ದಾರೆ.ದೃಶ್ಯಾವಳಿಯಲ್ಲಿ, ಮುಖ್ಯಮಂತ್ರಿಯನ್ನು ಸುತ್ತುವರಿದಿದ್ದ ಜನಜಂಗುಳಿ ನಡುವೆ ಹೂಗುಚ್ಛ ನೀಡಲು ಮುಂದಾದ ರಮೇಶ್‌ ಅವರನ್ನು ಭದ್ರತಾ ಸಿಬ್ಬಂದಿ ತಳ್ಳಿದ್ದರಿಂದ ಅವರು ಮುಗ್ಗರಿಸುತ್ತಾರೆ. ಅವರು ಸಾವರಿಸಿಕೊಳ್ಳುತ್ತಿದ್ದುದನ್ನು ಕಂಡ ಮುಖ್ಯಮಂತ್ರಿ ಕೋಪದಿಂದ ಸಿಬ್ಬಂದಿ ಯೊಬ್ಬರ ಮೇಲೆ ಕೈ ಮಾಡುತ್ತಾರೆ. ಅದೇ ವೇಳೆ ಆಯುಕ್ತರು ಅಲ್ಲಿಂದ ನಿರ್ಗಮಿಸುತ್ತಾರೆ.ಅವಮಾನವಾಯಿತು: ಕೆನ್ನೆಗೆ ಹೊಡೆದ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಮಾಧ್ಯಮಗಳಲ್ಲಿ ಅದನ್ನು ವೈಭವೀಕರಿಸಿದ್ದರಿಂದ ಆಗಿರುವ ಅವಮಾನವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನಾದರೂ ಮಾಧ್ಯಮಗಳು ನಿಜ ಏನೆಂಬುದನ್ನು  ಪ್ರಕಟಿಸಬೇಕು ಎಂದು ರಮೇಶ್‌ ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.