ಸಿಎಂ ನೆಚ್ಚಿನ ಆಟಗಾರ ತೆಂಡೂಲ್ಕರ್

7

ಸಿಎಂ ನೆಚ್ಚಿನ ಆಟಗಾರ ತೆಂಡೂಲ್ಕರ್

Published:
Updated:
ಸಿಎಂ ನೆಚ್ಚಿನ ಆಟಗಾರ ತೆಂಡೂಲ್ಕರ್

ಬೆಂಗಳೂರು: ರಾಜಕೀಯದ ಬಿಸಿಯನ್ನು ಕ್ಷಣಕಾಲ ಮರೆತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾವು ಬಾಲ್ಯದಲ್ಲಿ ಕ್ರಿಕೆಟ್ ಆಡಿದ ನೆನಪಿನ ಕ್ಷಣಗಳನ್ನು ಮೆಲುಕು ಹಾಕಿದರು.

ಭಾರತ ಕ್ರಿಕೆಟ್ ತಂಡವು ವಿಶ್ವಕಪ್‌ನಲ್ಲಿ ಯಶಸ್ವಿಯಾಗಲಿ ಎನ್ನುವ ಆಶಯದೊಂದಿಗೆ ನಗರ ಪ್ರದಕ್ಷಿಣೆ ನಡೆಸಿರುವ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದ ಶುಭಹಾರೈಕೆಗಳ ಸಂಗ್ರಹದ ಕ್ರಿಕೆಟ್ ರಥ ಏರಿದ ‘ಸಿಎಂ’ ಎಂದಿನ ಬಿಗುವಿನ ಮೊಗದಲ್ಲಿ ಚೆಂದದ ನಗೆಯನ್ನು ಬೀರುತ್ತಾ ಬೃಹತ್ ಬ್ಯಾಟ್ ಮೇಲೆ ಹಸ್ತಾಕ್ಷರ ಮಾಡಿದರು.‘ನಾನೂ ಕ್ರಿಕೆಟ್ ಆಡಿದ್ದೆ’ ಎಂದು ಉತ್ಸಾಹದಿಂದ ಹೇಳಿದ ಯಡಿಯೂರಪ್ಪ ಅವರು ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ತಾವು ಹೊಂದಿದ್ದ ಕ್ರಿಕೆಟ್ ಪ್ರೀತಿಯು ಈಗಲೂ ಕಡಿಮೆ ಆಗಿಲ್ಲವೆಂದರು. ಈಗಲೂ ಅವಕಾಶ ಸಿಕ್ಕಾಗ ಭಾರತ ತಂಡವು ಆಡುವ ಪಂದ್ಯಗಳನ್ನು ನೋಡುವುದಾಗಿ ಹೇಳಿದರು.‘ಲಿಟಲ್ ಚಾಂಪಿಯನ್’ ಖ್ಯಾತಿಯ ತೆಂಡೂಲ್ಕರ್ ಆಟದ ಸಾಮರ್ಥ್ಯವನ್ನು ಕೊಂಡಾಡಿದ ಅವರು ‘ಸಚಿನ್ ನನ್ನ ನೆಚ್ಚಿನ ಆಟಗಾರ’ ಎಂದು ತಿಳಿಸಿದರು. 1983ರಲ್ಲಿ ಭಾರತ ತಂಡವು ಚಾಂಪಿಯನ್ ಆಗಿದ್ದಾಗ ದೇಶದಲ್ಲಿ ಸಂಭ್ರಮದ ಅಲೆ ಎದ್ದಿತ್ತು. ಮತ್ತೊಮ್ಮೆ ಅಂಥ ಸಂತಸವನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಕಾಣಬೇಕೆಂದು ಅವರು ಆಶಿಸಿದರು.

ಕ್ರಿಕೆಟ್ ರಥವು ಬುಧವಾರ ಕೊಡಿಗೇಹಳ್ಳಿ, ಸಹಕಾರನಗರ, ಅಮೃತ್‌ನಗರ, ಬ್ಯಾಟರಾಯನಪುರ, ಜಕ್ಕೂರು ಆರ್.ಟಿ.ನಗರ, ಪ್ರದೇಶದಲ್ಲಿ ಸಂಚರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry