ಸಿಎಂ ಹಾದಿ ಸುಗಮ; ಜನರದು ದುರ್ಗಮ!

7

ಸಿಎಂ ಹಾದಿ ಸುಗಮ; ಜನರದು ದುರ್ಗಮ!

Published:
Updated:

ಗುಲ್ಬರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನದ ಹಿನ್ನೆಲೆಯಲ್ಲಿ ಚುರುಕಾಗಿರುವ ಮಹಾನಗರ ಪಾಲಿಕೆಯು ನಗರದಲ್ಲಿ ಅವರು ಸಂಚರಿಸುವ ರಸ್ತೆಗಳಿಗೆ ತೇಪೆಹಾಕಿ ‘ರಂಗೋಲಿ’ ಬಿಡಿಸಿದೆ. ಆದರೆ, ಮಳೆಗಾಲದಲ್ಲಿ ಇನ್ನಷ್ಟು ಅಧೋಗತಿಯಾದ ನಗರದ ಇನ್ನುಳಿದ ರಸ್ತೆಗಳನ್ನು ನೋಡುವವರೇ ಇಲ್ಲ!ಜಗತ್‌ ವೃತ್ತದಿಂದ ಕೆಬಿಎನ್‌ ದರ್ಗಾ ಕಡೆಗೆ ಸಂಚರಿಸುವ ರಸ್ತೆ ಯಾವಾಗಲೂ ತಗ್ಗುಗುಂಡಿ, ಕೊಳಚೆ ನೀರಿನಿಂದ ಕೂಡಿರುತ್ತದೆ. ಎರಡೇ ದಿನದಲ್ಲಿ ರಸ್ತೆ ಹೊಂಡಗಳಿಗೆ ಮುರುಮ್‌ ಸುರಿದು ಕುರುಪ ರಸ್ತೆಯ ಸ್ವರೂಪ ಬದಲಿಸಲಾಗಿದೆ. ಮಳೆಹಾನಿಗೀಡಾದ ರಸ್ತೆಗಳ ದುರಸ್ತಿಗೆ ರಾಜ್ಯ ಸರ್ಕಾರ ರೂ 5.5 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಘೋಷಿಸಿ ಒಂದು ತಿಂಗಳಾದರೂ ಅನುಷ್ಠಾನವಾಗಿಲ್ಲ.ಸೂಪರ್‌ ಮಾರ್ಕೆಟ್‌ನಿಂದ ಶಹಾಬಜಾರ್‌, ಸೂಪರ್‌ ಮಾರ್ಕೆಟ್‌ನಿಂದ ಗಂಜ್‌, ಜಿಲ್ಲಾ ಕೋರ್ಟ್‌ನಿಂದ ಜೆಸ್ಕಾಂ, ಪಿಡಿಎ ರೈಲ್ವೆ ಕೆಳ ಸೇತುವೆಯಿಂದ ನಾಗನಹಳ್ಳಿ ಕ್ರಾಸ್‌, ಚಂದ್ರಶೇಖರ್‌ ಪಾಟೀಲ ಕ್ರೀಡಾಂಗಣದಿಂದ ರಾಜಾಪುರ, ಆರ್‌ಟಿಓ ಕ್ರಾಸ್‌ನಿಂದ ರಾಜಾಪುರ, ಬಸವೇಶ್ವರ ನಗರ ರಸ್ತೆ, ಕಣ್ಣಿ ಮಾರ್ಕೆಟ್‌ನಿಂದ ಬ್ರಹ್ಮಪುರ–ಹೀಗೆ ನಗರದ ಬಹುತೇಕ ಕಡೆಯ ರಸ್ತೆ ಗುಂಡಿಗಳನ್ನು ಮಳೆಗಾಲಕ್ಕೂ ಮೊದಲೇ ದುರಸ್ತಿಗೊಳಿಸಿದ್ದರೆ, ಇಡೀ ರಸ್ತೆಗೆ ರಸ್ತೆ ಕೊಚ್ಚಿ ಹೋಗುವ ಸಾಧ್ಯತೆ ಇರುತ್ತಿರಲಿಲ್ಲ.ರಸ್ತೆ ಗುಂಡಿ ದುರಸ್ತಿ ಮಾಡುವುದು ಸೇರಿದಂತೆ ಮಳೆಹಾನಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್‌ ಇಸ್ಲಾಂ ಅವರು ವಿಶೇಷ ಸಭೆಯಲ್ಲಿ ಒಂದು ತಿಂಗಳ ಹಿಂದೆಯೇ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ದುರಸ್ತಿ ಕೆಲಸ ಮಾತ್ರ ಇನ್ನೂ ನಡೆಯುತ್ತಿಲ್ಲ.ಮುಖ್ಯಮಂತ್ರಿ ಆಗಮನದಿಂದ ದಿಢೀರ್‌ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆಯು ದರ್ಗಾ ರಸ್ತೆ ಗುಂಡಿಗಳನ್ನು ಮುಚಿ್ಚದೆ.ಮುಖ್ಯಮಂತ್ರಿಗಳ ರೂ 100 ಕೋಟಿ ವಿಶೇಷ ಅನುದಾನ ರಸ್ತೆ ಕಾಮಗಾರಿ ಆರಂಭಗೊಂಡು ಐದು ವರ್ಷಗಳಾದರೂ ಮುಗಿದಿಲ್ಲ. ಶಾಶ್ವತ ರಸ್ತೆ ನಿರ್ಮಾಣ ಯಾವಾಗಲಾದರೂ ಮುಗಿಯಲಿ, ಅಲ್ಲಿಯವರೆಗೂ ತಗ್ಗು ಬಿದ್ದಿರುವ ರಸ್ತೆಗಳನ್ನು ದುರಸ್ತಿಗೊಳಿಸಿದರೆ ಸಾಕು ಎನ್ನುವುದು ಜನರ ಅಳಲು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry