ಸಿಎನ್‌ಜಿ ತುಟ್ಟಿ

ಗುರುವಾರ , ಜೂಲೈ 18, 2019
28 °C

ಸಿಎನ್‌ಜಿ ತುಟ್ಟಿ

Published:
Updated:

ನವದೆಹಲಿ (ಪಿಟಿಐ): ಪೆಟ್ರೋಲ್ ದರ ಏರಿಕೆಯ ಬೆನ್ನ ಹಿಂದೆಯೇ ನವದೆಹಲಿಯಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ದರವೂ ಪ್ರತಿ ಕೆ.ಜಿಗೆ ರೂ 0.50ರಷ್ಟು ಏರಿಕೆಯಾಗಿದೆ.ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) `ಸಿಎನ್‌ಜಿ~ ದರವನ್ನು ್ಙ0.50ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದರದಂತೆ ಪ್ರತಿ ಕೆ.ಜಿ ಸಿಎನ್‌ಜಿಗೆ ನವದೆಹಲಿಯಲ್ಲಿ ್ಙ29.80 ಮತ್ತು ನೊಯಿಡಾ,ಗಾಜಿಯಾಬಾದ್‌ನಲ್ಲಿ ್ಙ 33.40 ರಷ್ಟಾಗಲಿದೆ.ಕಳೆದ ಏಪ್ರಿಲ್‌ನಲ್ಲಿ `ಸಿಎನ್‌ಜಿ~ ದರ  ್ಙ0.30ರಷ್ಟು ತುಟ್ಟಿಯಾಗಿತ್ತು. ಸದ್ಯ `ಎಲ್‌ಎನ್‌ಜಿ~ ದುಬಾರಿಯಾಗಿರುವುದರಿಂದ `ಸಿಎನ್‌ಜಿ~ ದರ ಮತ್ತೆ ಏರಿಕೆಯಾಗಿದೆ ಎಂದು `ಐಜಿಎಲ್~ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry