ಸಿಎಫ್‌ಟಿಆರ್‌ಐ: ಇಂದಿನಿಂದ 2 ದಿನ ಸಾರ್ವಜನಿಕರಿಗೆ ಮುಕ್ತ

7

ಸಿಎಫ್‌ಟಿಆರ್‌ಐ: ಇಂದಿನಿಂದ 2 ದಿನ ಸಾರ್ವಜನಿಕರಿಗೆ ಮುಕ್ತ

Published:
Updated:

ಮೈಸೂರು: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ ಟಿಆರ್‌ಐ) ಆಯೋಜಿಸಿರುವ 2 ದಿನಗಳ ‘ಮುಕ್ತ ದಿನಾಚರಣೆ’ಯನ್ನು ಸೆ. 26ರಂದು ಜಿಲ್ಲಾಧಿಕಾರಿ ಸಿ. ಶಿಖಾ ಉದ್ಘಾಟಿಸುವರು.

ಇದೇ ಸಂದರ್ಭದಲ್ಲಿ ನವದೆಹಲಿಯ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಮಂಡಳಿ (ಸಿಎಸ್‌ ಐಆರ್‌)ಯ 70 ವರ್ಷಗಳ ಸಾಧನೆ ತೋರಿಸುವ ‘ಡುಯಿಂಗ್ ಸೈನ್ಸ್ ವಿತ್ ಪರ್ಪಸ್’ ಪ್ರದರ್ಶನವೂ ಉದ್ಘಾಟನೆಗೊಳ್ಳಲಿದೆ.

ಇದರ ಪ್ರಯುಕ್ತ ಸೆ. 26 ಹಾಗೂ 27 ರಂದು ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶವಿದೆ. ಕೆಆರ್ಎಸ್ ರಸ್ತೆಯಲ್ಲಿನ ಆಕಾಶವಾಣಿ ಹಾಗೂ ವಾಣಿ ವಿಲಾಸ ವಾಟರ್ ವರ್ಕ್ಸ್ ಎದುರಿಗೆ ಇರುವ ದ್ವಾರಗಳಿಂದ ಉಚಿತ ಪ್ರವೇಶ ಕಲ್ಪಿಸಲಾಗಿದೆ.

‘ಸಂಸ್ಥೆ ಏನೂ ಮಾಡುತ್ತಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವುದೇ ಇದರ ಉದ್ದೇಶ’ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ರಾಮ್ ರಾಜಶೇಖರನ್ ತಿಳಿಸಿದರು.ಸಂಶೋಧನೆಗಳು, ತಂತ್ರಜ್ಞಾನ ಆಧರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳು ಹಾಗೂ ವಿನೂತನ ಯಂತ್ರಗಳ ಪ್ರಾತ್ಯಕ್ಷಿಕೆಗಳನ್ನು ಸಾರ್ವಜನಿಕರು ಕಣ್ತುಂಬಿ ಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry