`ಸಿಎಸ್‌ಆರ್' ವ್ಯಾಪ್ತಿಗೆ ಇನ್ನಷ್ಟು ಕಾರ್ಯಕ್ರಮ

7

`ಸಿಎಸ್‌ಆರ್' ವ್ಯಾಪ್ತಿಗೆ ಇನ್ನಷ್ಟು ಕಾರ್ಯಕ್ರಮ

Published:
Updated:

ನವದೆಹಲಿ(ಪಿಟಿಐ): ಪ್ರಧಾನಿ ರಾಷ್ಟ್ರೀಯ ವಿಪತ್ತು ನಿಧಿಗೆ ನೀಡುವ ದೇಣಿಗೆ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ನೀಡುವ ಕೊಡುಗೆಗಳನ್ನು ಸಹ ಕಂಪೆನಿಯ ಸಾಮಾಜಿಕ ಬದ್ಧತೆ(ಸಿಎಸ್‌ಆರ್) ಕಾರ್ಯಕ್ರಮಗಳಾಗಿ ಪರಿಗಣಿಸಲಾಗುತ್ತದೆ ಎನ್ನುತ್ತದೆ ಹೊಸ ಕಂಪೆನಿ ಕಾಯ್ದೆ.ಹೊಸ ಕಂಪೆನಿ ಕಾಯ್ದೆ-2013ರಡಿ ಹಲವು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು `ಸಿಎಸ್‌ಆರ್' ವ್ಯಾಪ್ತಿಗೆ ತರಲಾಗಿದೆ. ವಿಪತ್ತು ನಿಧಿಗೆ ನೀಡುವ ದೇಣಿಗೆ, ಬುಡಕಟ್ಟು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಹಿಂದುಳಿದ ವರ್ಗದವರಿಗೆ ನೀಡುವ ನೆರವು, ರಾಜ್ಯ ಸರ್ಕಾರಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೀಡುವ ಹಣವನ್ನೂ `ಸಿಎಸ್‌ಆರ್' ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.ಪರಿಸರ ಅಭಿವೃದ್ಧಿ ಸಂಬಂಧಿತ ಕಾರ್ಯಕ್ರಮಗಳು, ವೃತ್ತಿ ಆಧಾರಿತ ಕೌಶಲ ತರಬೇತಿ, ಸಾಮಾಜಿಕ ಉದ್ದಿಮೆ ಯೋಜನೆಗಳು ಸಹ `ಸಿಎಸ್‌ಆರ್' ಪಟ್ಟಿಯಲ್ಲಿ ಸೇರಿವೆ.ರೂ1 ಸಾವಿರ ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಅಥವಾ ರೂ5 ಕೋಟಿ ನಿವ್ವಳ ಲಾಭ ಗಳಿಸಿರುವ ಕಂಪೆನಿಗಳಿಗೆ ಹೊಸ ನಿಮಯ ಅನ್ವಯಿಸುತ್ತದೆ. ಇಂತಹ ಕಂಪೆನಿಗಳು `ಸಿಎಸ್‌ಆರ್' ಕಾರ್ಯಕ್ರಮಗಳ ಜಾರಿಗೆ ಪ್ರತ್ಯೇಕ ಸಮಿತಿ' ರಚಿಸುವಂತೆ ಕಂಪೆನಿ ಸಚಿವಾಲಯ ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry