ಸಿಎಸ್‌ಎ ಅಧ್ಯಕ್ಷ ಪಾಲ್ ರಾಜೀನಾಮೆ

ಸೋಮವಾರ, ಜೂಲೈ 22, 2019
23 °C

ಸಿಎಸ್‌ಎ ಅಧ್ಯಕ್ಷ ಪಾಲ್ ರಾಜೀನಾಮೆ

Published:
Updated:

ಜೋಹಾನ್ಸ್‌ಬರ್ಗ್ (ಪಿಟಿಐ): ಅನಿರೀಕ್ಷಿತವಾಗಿ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಜಾಕ್ ಪಾಲ್ ಅಚ್ಚರಿ ಮೂಡಿಸಿದ್ದಾರೆ.ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಡಳಿತ ವ್ಯವಸ್ಥೆಯನ್ನು ಉತ್ತಮ ಪಡಿಸುವ ಉದ್ದೇಶದಿಂದ ಕ್ರೀಡಾ ಸಚಿವ ಫಿಕಿಲ್ ಮಲುಲಾ ಅವರು ನಾಲ್ಕು ತಿಂಗಳ ಹಿಂದಷ್ಟೇ ಪಾಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಆಂತರಿಕ ಕಲಹದಿಂದಾಗಿ `ಬಹಳ ದಣಿದಿದ್ದೇನೆ~ ಎಂದು ಹೇಳುವ ಮೂಲಕ ಪಾಲ್ ಸ್ಥಾನ ತೊರೆದಿದ್ದಾರೆಂದು ಸಿಎಸ್‌ಎ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry