ಸಿಐಡಿಯಿಂದ ಕರಡು ಆರೋಪ ಪಟ್ಟಿ

7
ಕರ್ನಾಟ ಲೋಕಸೇವಾ ಆಯೋಗ ಹಗರಣ

ಸಿಐಡಿಯಿಂದ ಕರಡು ಆರೋಪ ಪಟ್ಟಿ

Published:
Updated:

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ 2011ರಲ್ಲಿ ನಡೆದ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿರುವ ಎಂಟು ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಸಿಐಡಿ ಪೊಲೀಸರು ಸರ್ಕಾರದ ಅನುಮತಿ ಕೋರಿದ್ದಾರೆ.ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಆಯೋಗದ ಹಿಂದಿನ ಅಧ್ಯಕ್ಷ ಗೋನಾಳ ಭೀಮಪ್ಪ ಸೇರಿದಂತೆ ಎಂಟು ಮಂದಿ ವಿರುದ್ಧ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಶನಿವಾರ 6,114 ಪುಟಗಳ ಕರಡು ಆರೋಪ ಪಟ್ಟಿ ಸಲ್ಲಿಸಿದ್ದಾರೆ.ಆರೋಪಿ ಸ್ಥಾನದಲ್ಲಿರುವ ಇತರರು: ಆಯೋಗದ ಸದಸ್ಯೆ ಡಾ.ಮಂಗಳಾ ಶ್ರೀಧರ್, ಕಾರ್ಯದರ್ಶಿ ಕೆ.ಆರ್. ಸುಂದರ್, ಅವರ ಆಪ್ತ ಸಹಾಯಕ ಅಶೋಕ್‌ಕುಮಾರ್,  ಪೀಠಾಧಿಕಾರಿ ಅರುಣಾಚಲಂ,  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮನಾಥ್ ಅಲಿ ಯಾಸ್ ಸೋಮೇಶ್, ರಾಜ್ಯ ಸಚಿವಾ ಲಯದ ನೌಕರ ರಾಜಶೇಖರ್ ಮತ್ತು ಬೆಂಗಳೂರು ಜಲಮಂಡಳಿ ಎಂಜಿನಿ ಯರ್ ಸುಧೀರ್ ಅಲಿಯಾಸ್ ಶ್ರೀಧರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry