ಭಾನುವಾರ, ಮೇ 9, 2021
17 °C

ಸಿಕಂದರಾಬಾದ್,ಚೆನ್ನೈಗೆ ವಿಶೇಷ ಎಸಿ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯವು ಇದೇ 21,22ರಂದು ಯಶವಂತಪುರದಿಂದ ಕ್ರಮವಾಗಿ ಸಿಕಂದರಾಬಾದ್ ಹಾಗೂ ಚೆನ್ನೈಗೆ ವಿಶೇಷ ಹವಾನಿಯಂತ್ರಿತ ರೈಲುಗಳನ್ನು ಓಡಿಸಲಿದೆ.ಯಶವಂತಪುರ- ಸಿಕಂದರಾಬಾದ್ (ರೈಲು ಸಂ.06545) ಸೂಪರ್‌ಫಾಸ್ಟ್ ರೈಲು ಗಾಡಿಯು (ಒಂದೇ ಬಾರಿ ಪ್ರಯಾಣ) 21ರಂದು ಯಶವಂತಪುರದಿಂದ ರಾತ್ರಿ 8.50ಕ್ಕೆ ಹೊರಟು ಮರುದಿನ ಬೆಳಿಗ್ಗೆ 8.35ಕ್ಕೆ ಸಿಕಂದರಾಬಾದ್ ತಲುಪಲಿದೆ. ಈ ರೈಲಿನಲ್ಲಿ 16 ಬೋಗಿಗಳಿದ್ದು, ಒಂದು ಪ್ರಥಮ ದರ್ಜೆ ಎಸಿ, ಐದು ಟು ಟಯರ್ ಎಸಿ, ಏಳು ತ್ರಿ ಟಯರ್ ಎಸಿ ಬೋಗಿಗಳನ್ನು ಹೊಂದಿದೆ.ಯಶವಂತಪುರ- ಚೆನ್ನೈ ಸೆಂಟ್ರಲ್ (ಸಂ.06546) ರೈಲು 22ರಂದು ರಾತ್ರಿ 11.55ಕ್ಕೆ ಹೊರಟು ಮರುದಿನ ಬೆಳಿಗ್ಗೆ 9.30ಕ್ಕೆ ಚೆನ್ನೈ ತಲುಪಲಿದೆ. ಈ ರೈಲಿನಲ್ಲಿ 16 ಬೋಗಿಗಳಿದ್ದು, ಒಂದು ಎಸಿ, ಐದು ಎಸಿ ಟು ಟಯರ್, ಏಳು ತ್ರಿ ಟಯರ್ ಬೋಗಿಗಳನ್ನು ಹೊಂದಿರುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.