ಸಿಕ್ಸರ್, ಬೌಂಡರಿ ಮಳೆ ಸುರಿಸಿದ ಪ್ರಕಾಶ್

ಸೋಮವಾರ, ಮೇ 27, 2019
29 °C

ಸಿಕ್ಸರ್, ಬೌಂಡರಿ ಮಳೆ ಸುರಿಸಿದ ಪ್ರಕಾಶ್

Published:
Updated:

ಮೈಸೂರು: ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳು ಶುಕ್ರವಾರ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ 18ನೇ ರಾಷ್ಟ್ರೀಯ ಅಂಧರ ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಪ್ರವೇಶಿಸಿದವು.ಮೊದಲ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಕರ್ನಾಟಕದ ಪ್ರಕಾಶ್ (ಔಟಾಗದೇ 199, 25ಬೌಂಡರಿ, 14ಸಿಕ್ಸರ್)  ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪೂರ್ವ ವಲಯ ತಂಡವನ್ನು 144 ರನ್ನುಗಳಿಂದ ಸೋಲಿಸಿತು.ಸ್ಕೋರು: ದಕ್ಷಿಣ ವಲಯ: 20 ಓವರುಗಳಲ್ಲಿ 3 ವಿಕೆಟ್‌ಗೆ 355 (ಪ್ರಕಾಶ್ ಅಜೇಯ 199, ವೆಂಕಟೇಶ್ 126); ಪೂರ್ವ ವಲಯ: 20 ಓವರುಗಳಲ್ಲಿ 9 ವಿಕೆಟ್‌ಗೆ 211 (ಸುಖರಾಮ್ 87, ಪಂಕಜ್ 46, ಅಜಯಕುಮಾರ ರೆಡ್ಡಿ 22ಕ್ಕೆ1, ಚಂದ್ರಬಾಬು 25ಕ್ಕೆ2, ಪುಷ್ಪರಾಜ್ 27ಕ್ಕೆ2); ಫಲಿತಾಂಶ: ದಕ್ಷಿಣ ವಲಯಕ್ಕೆ 144 ರನ್ನುಗಳ ಜಯ.ಪಶ್ಚಿಮ ವಲಯ: 13.1 ಓವರುಗಳಲ್ಲಿ 180 (ಅನುಮನ್ 68, ವಿಶಾಖ ಪಟೇಲ್ 40, ಬಾಲಮುಕುಂದ 26ಕ್ಕೆ4);ಉತ್ತರ ವಲಯ: 15 ಓವರುಗಳಲ್ಲಿ 134 (ಬಾಲಮುಕುಂದ 43, ಹಿತೇಶ್ 33ಕ್ಕೆ3, ಸುಭಾಷ್ 44ಕ್ಕೆ3, ಅನುಮನ್ 25ಕ್ಕೆ2); ಫಲಿತಾಂಶ: ಪಶ್ಚಿಮ ವಲಯಕ್ಕೆ 46 ರನ್ನುಗಳ ಜಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry