ಬುಧವಾರ, ನವೆಂಬರ್ 13, 2019
23 °C

ಸಿಕ್ಸ್ ಪ್ಯಾಕ್‌ಗಾಗಿ ಜಿಮ್‌ಗೆ ಹೋಗದ ಸನ್ನಿ

Published:
Updated:

ಸಿಕ್ಸ್‌ಪ್ಯಾಕ್ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲವೆಂದ ಮಾತ್ರಕ್ಕೆ ಫಿಟ್‌ನೆಸ್‌ನಲ್ಲಿ ಆಸಕ್ತಿ ಇಲ್ಲವೆಂದೇನೂ ಅರ್ಥವಲ್ಲ ಎಂದು ನಟ ಸನ್ನಿ ಡಿಯೋಲ್ ಹೇಳಿದ್ದಾರೆ. 56 ವರ್ಷದ ನಟ 90ರ ದಶಕದಲ್ಲಿ ಆ್ಯಕ್ಷನ್ ಹೀರೊ ಎಂದು ಬಿರುದು ಪಡೆದಿದ್ದರು. `ಗಾಯಲ್', `ಘಾತಕ್ ' ಇತ್ಯಾದಿ ಚಿತ್ರಗಳಲ್ಲಿನ ಅವರ ನಟನೆ, ದೇಹದಾರ್ಢ್ಯ ಮುಂತಾದವು ಸಾಹಸ ಚಿತ್ರಗಳ ನಾಯಕನಿಗೆ ಇರಬೇಕಾದ ಗುಣಲಕ್ಷಣಗಳನ್ನು ಬಿಂಬಿಸುವಂತಿದ್ದವು.ವಯಸ್ಸು ಅವರತ್ತು ಸಮೀಪಿಸುತ್ತಿರುವಾಗಲೂ ಸನ್ನಿ ಈಗಲೂ ಫಿಟ್‌ನೆಸ್ ಮಂತ್ರವನ್ನು ಜಪಿಸುತ್ತಾರಂತೆ. `ಸಿಕ್ಸ್‌ಪ್ಯಾಕ್‌ಗಾಗಿ ಹಾಗೂ ಮಾಂಸಖಂಡಗಳನ್ನು ಹುರಿಗೊಳಿಸಿಕೊಳ್ಳಲು ನಾನು ವ್ಯಾಯಾಮ ಮಾಡುವುದಿಲ್ಲ. ಸಿನಿಮಾ ಕ್ಷೇತ್ರಕ್ಕೆ ಕಾಲಿಡುವಾಗ ಸಾಹಸಮಯ ಚಿತ್ರ ಎಂದರೆ ಅದು ನಿಜವಾದ ಸಾಹಸವೇ ಆಗಿತ್ತು. ಈಗಿನಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಕಾಲಿಗೆ, ಕೈಗೆ ಹಗ್ಗ ಕಟ್ಟುತ್ತಿರಲಿಲ್ಲ. ಅದು ನಿಜವಾಗಿಯೂ ಮಜ ನೀಡುತ್ತಿತ್ತು. `ಬೇತಾಬ್' ಚಿತ್ರದ ಚಿತ್ರೀಕರಣ ಈಗಲೂ ನನಗೆ ನೆನಪಿದೆ. ನನ್ನ ತಂದೆಗೆ (ಧರ್ಮೇಂದ್ರ) ನಾನು ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುವುದು ಎಳ್ಳಷ್ಟೂ ಇಷ್ಟವಿರಲಿಲ್ಲ. ಆದರೆ ನನ್ನ ಡ್ಯೂಪ್ ಅದನ್ನು ಮಾಡಲು ವಿಫಲವಾಗಿದ್ದರಿಂದ ಎಲ್ಲಾ ಸಾಹಸ ದೃಶ್ಯಗಳನ್ನೂ ನಾನೇ ಮಾಡಬೇಕಾಯಿತು' ಎಂದು ಸನ್ನಿ ಹೆಮ್ಮೆಯಿಂದ ನುಡಿದಿದ್ದಾರೆ.ಸನ್ನಿ ಅವರ ಮುಂದಿನ ಚಿತ್ರ `ಯಮಲಾ ಪಗಲಾ ದಿವಾನಾ 2'. ಚಿತ್ರದಲ್ಲಿ ಸನ್ನಿ ಅವರನ್ನು ಸಾಹಸ ದೃಶ್ಯಗಳಲ್ಲಿ ಕಾಣಬಹುದು. ಜತೆಗೆ ಈ ಚಿತ್ರದಲ್ಲಿ ತಂದೆ ಧರ್ಮೇಂದ್ರ, ತಮ್ಮ ಬಾಬಿ ಸೇರಿದಂತೆ ಇಡೀ ಕುಟುಂಬವನ್ನೇ ತೆರೆಯ ಮೇಲೆ ನೋಡಬಹುದಾಗಿದೆ.

 

ಪ್ರತಿಕ್ರಿಯಿಸಿ (+)