ಸಿಖ್‌ ಪ್ರೊಫೆಸರ್‌ ಮೇಲೆ ಹಲ್ಲೆ

7

ಸಿಖ್‌ ಪ್ರೊಫೆಸರ್‌ ಮೇಲೆ ಹಲ್ಲೆ

Published:
Updated:

ನ್ಯೂಯಾರ್ಕ್‌ (ಪಿಟಿಐ): ಕೊಲಂಬಿಯಾ ವಿಶ್ವ ವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಖ್‌ ಪ್ರೊಫೆಸರ್‌ ಮೇಲೆ ಮೂವತ್ತು ಜನರ ತಂಡವೊಂದು ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಹಲ್ಲೆ ನಡೆಸುವ ವೇಳೆ ದುಷ್ಕರ್ಮಿ ಗಳು ಪ್ರೊಫೆಸರ್‌ ಅವರನ್ನು ‘ಒಸಾಮ’ ಮತ್ತು ‘ಭಯೋತ್ಪಾದಕ’ ಎಂದು ಕರೆದಿದ್ದಾರೆ. ಇದೊಂದು ಜನಾಂಗೀಯ ಹಲ್ಲೆ ಎಂದು ಪರಿಗಣಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ಕೂಲ್‌ ಆಫ್‌ ಇಂಟರ್‌ನ್ಯಾಷನಲ್‌ ಆಂಡ್‌ ಪಬ್ಲಿಕ್‌ ಅಫೇರ್‌ಸನಲ್ಲಿ ಪ್ರೊಫೆ ಸರ್‌ ಆಗಿರುವ 31 ವರ್ಷ ವಯಸ್ಸಿನ ಪ್ರಭ್‌ಜೋತ್‌ ಸಿಂಗ್‌ ಅವರು ಶನಿವಾರ ರಾತ್ರಿ ಹರ್ಲೆಮ್‌ ಎಂಬಲ್ಲಿ ನಡೆದು ಕೊಂಡು ಹೋಗು­ತ್ತಿದ್ದಾಗ ಹಲ್ಲೆ ನಡೆದಿದೆ. ಘಟನೆಯಲ್ಲಿ ಸಿಂಗ್‌ ಅವರ ದವಡೆ ಮುರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry