ಮಂಗಳವಾರ, ಜನವರಿ 28, 2020
29 °C

ಸಿಖ್ ನಾಡಲ್ಲಿ 93 ಮಹಿಳಾ ಹುರಿಯಾಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ (ಪಿಟಿಐ): ಪಂಜಾಬ್ ವಿಧಾನಸಭಾ ಚುನಾವಣಾ ಕಣದಲ್ಲಿ ಈ ಬಾರಿ 93 ಮಹಿಳಾ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಕಾಂಗ್ರೆಸ್ ಅತಿ ಹೆಚ್ಚು ಮಹಿಳೆಯರನ್ನು ಕಣಕ್ಕೆ ಇಳಿಸಿದ್ದು, ಆ ನಂತರದ ಸ್ಥಾನದಲ್ಲಿ ಅಕಾಲಿದಳವಿದೆ. ಕಾಂಗ್ರೆಸ್ 11, ಅಕಾಲಿದಳ 10, ಬಿಜೆಪಿ ಮೂವರು, ಇತರ ಪಕ್ಷಗಳಿಂದ 24 ಮತ್ತು 45 ಮಹಿಳೆಯರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.ಒಟ್ಟು 117 ಕ್ಷೇತ್ರಗಳಲ್ಲಿ 1,080 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ಧು ಅವರ ಪತ್ನಿ ನವಜೋತ್ ಕೌರ್ ಅಮೃತಸರ (ಪೂರ್ವ ಕ್ಷೇತ್ರ)ದಿಂದ ಸ್ಪರ್ಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹರ್‌ಚರಣ್ ಸಿಂಗ್ ಬ್ರಾರ್ ಅವರ ಸೊಸೆ 60 ವರ್ಷದ ಕರಣ್ ಕೌರ್ ಮುಕ್ತಸರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

 

ಪ್ರತಿಕ್ರಿಯಿಸಿ (+)