ಸಿಖ್ ವಿರೋಧಿ ಗಲಭೆ: ಸೋನಿಯಾಗೆ ಸಮನ್ಸ್

7
ನ್ಯೂಯಾರ್ಕ್ ಫೆಡರಲ್ ಕೋರ್ಟ್ ಆದೇಶ

ಸಿಖ್ ವಿರೋಧಿ ಗಲಭೆ: ಸೋನಿಯಾಗೆ ಸಮನ್ಸ್

Published:
Updated:
ಸಿಖ್ ವಿರೋಧಿ ಗಲಭೆ: ಸೋನಿಯಾಗೆ ಸಮನ್ಸ್

ನ್ಯೂಯಾರ್ಕ್ (ಪಿಟಿಐ): ಭಾರತದಲ್ಲಿ 1984ರಲ್ಲಿ ನಡೆದ ಸಿಖ್ ವಿರೋಧಿ ಗಲಭೆಯಲ್ಲಿ ಭಾಗಿಯಾದ ಪಕ್ಷದ ನಾಯಕರಿಗೆ ರಕ್ಷಣೆ ನೀಡಿರುವ ಆರೋಪದ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಲ್ಲಿನ ಫೆಡರಲ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.ಸಿಖ್ಖರ ನ್ಯಾಯಕ್ಕಾಗಿ ಹೋರಾಡುತ್ತಿರುವ ಬಲಪಂಥೀಯ ಸಂಘಟನೆ (ಎಸ್‌ಎಫ್‌ಜೆ) ಮತ್ತು ಗಲಭೆಯ ಇಬ್ಬರು ಸಂತ್ರಸ್ತರು ಸಲ್ಲಿಸಿದ ದೂರಿನ ಮೇರೆಗೆ ಇಲ್ಲಿನ ಅಮೆರಿಕ ಪೂರ್ವ ಜಿಲ್ಲಾ ನ್ಯಾಯಾಲಯ ಈ ಸಮನ್ಸ್ ಜಾರಿಗೊಳಿಸಿದೆ.ಸೋನಿಯಾ ಪಾತ್ರದಿಂದ ಆಗಿರುವ ಹಾನಿಗೆ ದಂಡ ಮತ್ತು ಸೂಕ್ತ ಪರಿಹಾರವನ್ನು ದೊರಕಿಸಿಕೊಡುವಂತೆಯೂ ಅರ್ಜಿದಾರರು ಮನವಿ ಮಾಡಿದ್ದಾರೆ.ಈ ಬೆಳವಣಿಗೆ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, `ಗಲಭೆ ನಡೆದು 30 ವರ್ಷಗಳ ನಂತರ ಮತ್ತು ಸೋನಿಯಾ ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ಭೇಟಿ ನೀಡಿರುವ ಈ ಸಂದರ್ಭದಲ್ಲಿ ಸಮನ್ಸ್ ಜಾರಿ ಮಾಡಿರುವುದರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ' ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry