ಸಿಗದ ಆಶ್ರಯ; ತಪ್ಪದ ಅಲೆದಾಟ ver.8

7

ಸಿಗದ ಆಶ್ರಯ; ತಪ್ಪದ ಅಲೆದಾಟ ver.8

Published:
Updated:

ರಜೆ ಸಿಕ್ಕಾಗ ಗೋವಾಕ್ಕೆ ಪ್ರವಾಸ ತೆರಳುವುದು ಎಲ್ಲರಿಗೂ ಇಷ್ಟ. ವಿದೇಶೀಯರಿಗೂ ಗೋವಾ ಇಷ್ಟದ ತಾಣವೇ. ಇದೀಗ ಪೂರ್ವ ಯೂರೋಪ್‌ನ ರಾಷ್ಟ್ರವಾದ ಉಕ್ರೇನ್ ಜನರಿಗೂ ಗೋವಾ ಮೆಚ್ಚಿನ ಸ್ಥಳವಾಗಿ ಮಾರ್ಪಟ್ಟಿದ್ದು ಅಲ್ಲಿಂದ ತಂಡೋಪತಂಡವಾಗಿ  ಜನ ಆಗಮಿಸುತ್ತಿದ್ದಾರೆ.‘ಗೋವಾ ನಮ್ಮ ಕನಸಿನ ತಾಣ. ಉಕ್ರೇನ್‌ನ ಮಾಧ್ಯಮಗಳು ಮತ್ತು ಜನರಿಂದ ಗೋವಾದ ಬಗ್ಗೆ ಭಾರೀ ಪ್ರಚಾರ ಸಿಕ್ಕಿದ್ದು ಜನ ಗೋವಾಕ್ಕೆ ತೆರಳಲು ಹಾತೊರೆಯುತ್ತಿದ್ದಾರೆ’ ಎಂದು ಭಾರತದ ವೀಸಾ ಪಡೆಯಲು ಪ್ರಯತ್ನಿಸುತ್ತಿರುವ ತಾನ್ಯಾ ಜಿನೆವೆರಾ ಸುದ್ದಿಸಂಸ್ಥೆಗೆ ತಿಳಿಸಿದರು.‘ಯಾರಿಗೇ ಆಗಲಿ ಪದೇ ಪದೇ ಥಾಯ್ ಬೀಚ್‌ಗೆ ಹೋಗುವುದು ಇಷ್ಟವಾಗದು. ಸ್ವಲ್ಪ ಬದಲಾವಣೆ ಬೇಕೇ ಬೇಕು’ ಎನ್ನುತ್ತಾರೆ ಅವರು.ಆರ್ಥಿಕವಾಗಿ ಹಿಂದುಳಿದಿದ್ದ ಉಕ್ರೇನ್ ಕಳೆದ ಕೆಲವು ವರ್ಷಗಳಲ್ಲಿ ಚೇತರಿಸಿಕೊಂಡಿತ್ತು.ಈ ಹಿನ್ನೆಲೆಯಲ್ಲಿ ಜನ ಚಳಿಗಾಲದಲ್ಲಿ ಪ್ರವಾಸಿ ತಾಣಗಳಿಗೆ ಹೋಗಲು ಆರಂಭಿಸಿದ್ದು ಇದೀಗ ಗೋವಾದತ್ತ ದೃಷ್ಟಿ ಹಾಯಿಸಿದ್ದಾರೆ. ಇದಕ್ಕಾಗಿ ನೇರ ವಿಮಾನದ ಸೌಲಭ್ಯವನ್ನೂ ಕಲ್ಪಿಸಿಕೊಡಲಾಗಿದೆ.ಇಲ್ಲಿನ ಭಾರತೀಯ ರಾಯಭಾರ ಕಚೇರಿಯ ಮುಂದೆ ಪ್ರತೀ ದಿನ ವೀಸಾಕ್ಕಾಗಿ ಅರ್ಜಿ ಸಲ್ಲಿಸಲು ನೂರಾರು ಮಂದಿ ಸರತಿಯ ಸಾಲಲ್ಲಿ ನಿಂತಿರುವುದು ಕಂಡು ಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry