ಸಿಗದ ಕಾಂಗ್ರೆಸ್ ಸಹಕಾರ: ಮಾಯಾ

7

ಸಿಗದ ಕಾಂಗ್ರೆಸ್ ಸಹಕಾರ: ಮಾಯಾ

Published:
Updated:
ಸಿಗದ ಕಾಂಗ್ರೆಸ್ ಸಹಕಾರ: ಮಾಯಾ

ಸೀತಾಪುರ  ಉತ್ತರ ಪ್ರದೇಶ (ಪಿಟಿಐ): ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಕಳೆದ ಐದು ವರ್ಷಗಳಿಂದಲೂ ತಮಗೆ ಸಹಕಾರ ನೀಡುತ್ತಿಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಬುಧವಾರ ಆರೋಪಿಸಿದ್ದಾರೆ.ವರದಿಗಾರರ ಜತೆ ಮಾತನಾಡಿದ ಅವರು, `ಎಲ್ಲಾ ವರ್ಗದ ಜನರನ್ನು ತಮ್ಮ ಪಕ್ಷ ಮಾತ್ರ ಸಬಲಗೊಳಿಸಬಲ್ಲುದು~ ಎಂದಿದ್ದಾರೆ.ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ. ಈ ಹಿಂದೆ ಯಾವ ಸರ್ಕಾರವೂ ಕೈಗೊಳ್ಳದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಿದೆ ಎಂದು ಹೇಳಿದ್ದಾರೆ.`ಜನಸಂಖ್ಯೆಯನ್ನು ಪರಿಗಣಿಸಿದರೆ ಅತಿ ದೊಡ್ಡ ರಾಜ್ಯ ಇದು. ಉತ್ತರಪ್ರದೇಶ ಹಿಂದುಳಿದಿರುವುದನ್ನು ಹೋಗಲಾಡಿಸಲು ಐದು ವರ್ಷಗಳು ಸಾಕಾಗುವುದಿಲ್ಲ. ಕೇಂದ್ರ ಸರ್ಕಾರ ಕೂಡ ನಮಗೆ ನೆರವು ನೀಡಲಿಲ್ಲ~ ಎಂದು ದೂರಿದ್ದಾರೆ.ರಾಜ್ಯದ ಅಭಿವೃದ್ಧಿಗಾಗಿ ಇನ್ನೂ ಕೆಲಸ ಆಗಬೇಕಿದೆ ಎಂದೂ ಮಾಯಾವತಿ ತಿಳಿಸಿದ್ದಾರೆ. ನಂತರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಬಿಎಸ್‌ಪಿ ಜನರ ಪರವಾಗಿರುವ ಉತ್ತಮ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry