ಸಿಗ್ನಲ್ ಅವಧಿ ಹೆಚ್ಚಿಸಿ...

7

ಸಿಗ್ನಲ್ ಅವಧಿ ಹೆಚ್ಚಿಸಿ...

Published:
Updated:

ಕಾವೇರಿ ಜಂಕ್ಷನ್ ಕಡೆಯಿಂದ ಮಲ್ಲೇಶ್ವರದ ಕಡೆಗೆ ಹೋಗುವ ಸದಾಶಿವನಗರ ಬಾಷ್ಯಂ ವೃತ್ತದ ಬಳಿ ಸಿಗ್ನಲ್ ಅವಧಿ ಕೇವಲ 27 ನಿಮಿಷಗಳದ್ದಾಗಿದೆ. ಇದರಿಂದ ವಾಹನ ಚಾಲಕರಿಗೆ ತುಂಬಾ ತೊಂದರೆ ಆಗುತ್ತಿದೆ.ಕೆಂಪು ಸಿಗ್ನಲ್ ಬಿದ್ದರೂ ಉಳಿದ ಕಡೆಯಿಂದ ಬರುವ ವಾಹನಗಳು 5-10 ಸೆಕೆಂಡ್ ಹೆಚ್ಚಿಗೆ ಓಡಾಡುವ ಕಾರಣ, ಕಾವೇರಿ ಜಂಕ್ಷನ್ ಕಡೆಯಿಂದ ಮಲ್ಲೇಶ್ವರದತ್ತ ಹೋಗುವವರಿಗೆ ಕೇವಲ 10-15 ಸೆಕೆಂಡ್ ಉಳಿಯುತ್ತದೆ. ಒಂದೆರಡು ವಾಹನ ದಾಟುವ ಒಳಗೇ ಕೆಂಪು ಸಿಗ್ನಲ್ ಬಿದ್ದು ಬಿಡುತ್ತದೆ. ಪುನಃ ಹಸಿರು ಸಿಗ್ನಲ್ ಬರಲು ಮೂರು ನಿಮಿಷ ಕಾಯಬೇಕು.

ವಾಹನಗಳ ದಟ್ಟಣೆ ಹೆಚ್ಚಿರುವ `ಪೀಕ್ ಅವರ್~ನಲ್ಲಿ ಕೂಡ ಇದೇ ರೀತಿ ಆಗುವುದಿಂದ ತೊಂದರೆ ಆಗುತ್ತಿದೆ. ದಯವಿಟ್ಟು ಸಿಗ್ನಲ್ ಅವಧಿ ಹೆಚ್ಚು ಮಾಡಬೇಕಾಗಿ ವಿನಂತಿ

-

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry