ಶನಿವಾರ, ಫೆಬ್ರವರಿ 27, 2021
28 °C

ಸಿಗ್ನಲ್ ಕೊಠಡಿಯಲ್ಲಿ ಬೆಂಕಿ: ರೈಲು ಸಂಚಾರ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಗ್ನಲ್ ಕೊಠಡಿಯಲ್ಲಿ ಬೆಂಕಿ: ರೈಲು ಸಂಚಾರ ಅಸ್ತವ್ಯಸ್ತ

ಮುಂಬೈ (ಪಿಟಿಐ): ಕುರ್ಲಾ ಮತ್ತು ವಿದ್ಯಾವಿಹಾರ್ ನಡುವಿನ ರೈಲು ಮಾರ್ಗದ ಸಿಗ್ನಲ್ ನಿಯಂತ್ರಣ ಕೊಠಡಿಯಲ್ಲಿ ಮಂಗಳವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಸೆಂಟ್ರಲ್ ರೈಲು ಮಾರ್ಗದ ಸಾವಿರಾರು ಪ್ರಯಾಣಿಕರು ಬುಧವಾರ ನಿಲ್ದಾಣಗಳಲ್ಲಿ ಸಿಲುಕಿಕೊಂಡು ಪರದಾಡುವಂತಾಯಿತು.ಬಹುತೇಕ ಸ್ಥಳೀಯ ರೈಲುಗಳು ತಡವಾಗಿ ಸಂಚರಿಸಿದವು. ಇದರಿಂದಾಗಿ ಕಚೇರಿಗೆ ತೆರಳುವವರು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದರು.`ಸಿಗ್ನಲ್ ಸಲಕರಣೆಗಳು ಬೆಂಕಿಗೆ ಆಹುತಿಯಾಗಿ ಅಪಾರ ನಷ್ಟ ಸಂಭವಿಸಿದೆ. ಸುಮಾರು ಅರ್ಧ ಗಂಟೆಯಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಯಿತು~ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.ಬುಧವಾರ ನಸುಕಿನಲ್ಲಿ 3.30ರ ವೇಳೆಗೆ ರೈಲು ಸಂಚಾರ ಭಾಗಶಃ ಪುನರಾರಂಭಗೊಂಡಿತು. ಆದರೆ ಈ ಮಾರ್ಗದ ಸಂಚಾರ ಸಂಪೂರ್ಣವಾಗಿ ಪುನರಾರಂಭಗೊಳ್ಳಲು ಇನ್ನೂ ಮೂರರಿಂದ ನಾಲ್ಕು ದಿನಗಳು ತಗುಲಬಹುದು ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.