`ಸಿಟಿಎಸ್' ಚೆಕ್ ಗಡುವು ವಿಸ್ತರಣೆ

7

`ಸಿಟಿಎಸ್' ಚೆಕ್ ಗಡುವು ವಿಸ್ತರಣೆ

Published:
Updated:

ಮುಂಬೈ (ಪಿಟಿಐ): ಏಕರೂಪದ ಭದ್ರತಾ ಅಂಶಗಳಿರುವ `ಸಿಟಿಎಸ್-2010' ಮಾದರಿ ಚೆಕ್‌ಗಳನ್ನು ವಿತರಿಸಲು ಬ್ಯಾಂಕುಗಳಿಗೆ ನೀಡಿದ್ದ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2013ರ ಮಾರ್ಚ್ 31ರವರೆಗೆ ವಿಸ್ತರಿಸಿದೆ.ಹೊಸ ಮಾನದಂಡ ಜಾರಿಗೆ ತರಲು  ಕಾಲಾವಕಾಶ ನೀಡುವಂತೆ ಬ್ಯಾಂಕುಗಳು ಆರ್‌ಬಿಗೆ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಹಕರು ಇನ್ನು ಮೂರು ತಿಂಗಳು ಹಳೆಯ ಚೆಕ್‌ಗಳನ್ನೇ ವಹಿವಾಟಿಗೆ ಬಳಸಿಕೊಳ್ಳಬಹುದು ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.

`ಸಿಟಿಎಸ್-2010' ಮಾದರಿ ಚೆಕ್ ಬಳಕೆಗೆ ತರಲು ಡಿಸೆಂಬರ್ 31 ಅಂತಿಮ ದಿನವಾಗಿತ್ತು.ಎಲ್ಲ ಬ್ಯಾಂಕುಗಳು ಏಕರೂಪದ ಭದ್ರತಾ ಅಂಶಗಳಿರುವ ಚೆಕ್ ಬಳಸುವುದರಿಂದ ಚೆಕ್ ತಿದ್ದುವುದು ಸೇರಿದಂತೆ ಇತರೆ ವಂಚನೆಗಳನ್ನು ತಡೆಯಬಹುದಾಗಿದೆ.  ಚಿತ್ರ ರೂಪದಲ್ಲಿರುವ ಅಕ್ಷರಗಳನ್ನು ಗುರುತಿಸುವ `ಅಕ್ಷರ ಗ್ರಾಹಕ' ತಂತ್ರಜ್ಞಾನ ಇಲ್ಲಿ ಬಳಸಲಾಗುತ್ತದೆ.  ಸದ್ಯ ಕೆಲವು ಬ್ಯಾಂಕುಗಳು `ಮಲ್ಟಿ-ಸಿಟಿ' ಮತ್ತು ಪೆಯೇಬಲ್ ಅಟ್-ಪಾರ್ ಚೆಕ್‌ಗಳಲ್ಲಿ `ಸಿಟಿಎಸ್' ತಂತ್ರಜ್ಞಾನ ಬಳಸುತ್ತಿವೆ.`ಎಸ್‌ಎಂಇ' ವಲಯ ದೇಶದ `ಜಿಡಿಪಿ'ಗೆ ಶೇ 7ರಷ್ಟು ಮತ್ತು ಒಟ್ಟಾರೆ ಕೈಗಾರಿಕಾ ಉತ್ಪಾದನೆಗೆ ಶೇ 45ರಷ್ಟು  ಕೊಡುಗೆ ನೀಡಿದ್ದು, ಕೃಷಿ ನಂತರ ಅತಿ ಹೆಚ್ಚು ಉದ್ಯೋಗಾವಕಾಶ ಒದಗಿಸಿದ ಕ್ಷೇತ್ರ ಎಂದರು.ಭಾರತ-ಆಸ್ಟ್ರೇಲಿಯಾ ವಹಿವಾಟು ವೃದ್ಧಿ

ಕೊಚ್ಚಿ(ಪಿಟಿಐ):
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಾಣಿಜ್ಯ ವಹಿವಾಟು ಕಳೆದ ಐದು ವರ್ಷಗಳಲ್ಲಿ ದ್ವಿಗುಣಗೊಂಡಿದ್ದು, 21ಕೋಟಿ ಡಾಲರ್‌ಗಳಿಗೆ  ರೂ 11.55 ಲಕ್ಷ ಕೋಟಿ) ಏರಿಕೆ ಕಂಡಿದೆ ಎಂದು ಭಾರತದಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಲ್ಯಾಕ್ಲಾನ್ ಸ್ಟ್ರಾನ್ ಹೇಳಿದ್ದಾರೆ.ಕಳೆದ ವರ್ಷ ಭಾರತ ಆಸ್ಟ್ರೇಲಿಯಾದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ 11 ಕೋಟಿ ಡಾಲರ್‌ನಷ್ಟು ( ರೂ 6.05 ಲಕ್ಷ ಕೋಟಿ) ಹೂಡಿಕೆ ಮಾಡಿದೆ. ಆಸ್ಟ್ರೇಲಿಯಾಕ್ಕೆ ಉನ್ನತ ಅಧ್ಯಯನ ಬರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಮತ್ತೆ ಹೆಚ್ಚಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry