ಸಿಟಿಗ್ರೂಪ್‌ನಿಂದ ವಿಕ್ರಂ ಪಂಡಿತ್ ನಿರ್ಗಮನ

7

ಸಿಟಿಗ್ರೂಪ್‌ನಿಂದ ವಿಕ್ರಂ ಪಂಡಿತ್ ನಿರ್ಗಮನ

Published:
Updated:

ನ್ಯೂಯಾರ್ಕ್ (ಪಿಟಿಐ): ಅಮೆರಿಕದ ಬೃಹತ್ ಬ್ಯಾಂಕಿಂಗ್ ಸಮೂಹ ಸಂಸ್ಥೆ `ಸಿಟಿಗ್ರೂಪ್~ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ವಿಕ್ರಂ ಪಂಡಿತ್ (55) ಮಂಗಳವಾರ ನಿರ್ಗಮಿಸಿದರು. ಕಂಪೆನಿಯ ನಿರ್ದೇಶಕ ಮಂಡಳಿ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.`ಸಿಟಿಗ್ರೂಪ್~ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದ್ದು, ನಿವ್ವಳ ಲಾಭ ಗಳಿಕೆಯಲ್ಲಿ ಶೇ 88ರಷ್ಟು ಕುಸಿತ ಕಂಡಿತ್ತು. ಅಂದರೆ ಲಾಭದ ಪ್ರಮಾಣ 46.80 ಕೋಟಿ ಡಾಲರ್‌ನಷ್ಟು (ರೂ.2480 ಕೋಟಿ) ಅಲ್ಪ ಪ್ರಮಾಣಕ್ಕೆ ಕುಸಿದಿದೆ. ಫಲಿತಾಂಶ ಪ್ರಕಟಣೆ ಮರುದಿನವೇ ವಿಕ್ರಂ ನಿರ್ಗಮನವಾಗಿದೆ.ಈ ಮಧ್ಯೆ ಸಿಟಿಗ್ರೂಪ್ ನಿರ್ದೇಶಕ ಮಂಡಳಿ ಸಭೆ ಸೇರಿ, ಮೈಕೇಲ್ ಕೊರ್ಬ್ಯಾಟ್ ಅವರನ್ನು `ಸಿಇಒ~ ಮತ್ತು ನಿರ್ದೇಶಕ ಹುದ್ದೆಗೆ ಅವಿರೋಧವಾಗಿ ಆಯ್ಕೆ ಮಾಡಿದೆ.`ಕೆಲವು ವರ್ಷಗಳಿಂದ ಕಂಪೆನಿ ಪ್ರಗತಿಗಾಗಿ ಸಾಕಷ್ಟು ಶ್ರಮಿಸಿದೆ. ನಿರ್ಗಮನಕ್ಕೆ ಇದು ಸಕಾಲ. ನನ್ನಿಂದ ತೆರವಾಗುತ್ತಿರುವ ಹುದ್ದೆಗೆ ಕೊರ್ಬ್ಯಾಟ್ ಉತ್ತಮ ಆಯ್ಕೆ~ ಎಂದು ವಿಕ್ರಂ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry