ಸಿಟಿ ಸಮಾಚಾರ

7

ಸಿಟಿ ಸಮಾಚಾರ

Published:
Updated:

ವಧು ವರರ ವಿಶೇಷ ಮುಖಾಮುಖಿ

ಲಿಂಗಾಯತ ಕಲ್ಯಾಣ ಟ್ರಸ್ಟ್ ವತಿಯಿಂದ ಡಿಸೆಂಬರ್ 9 ರಂದು ಮಧ್ಯಾಹ್ನ 2ಕ್ಕೆ ವೀರಶೈವ ಜನಾಂಗದ ಡಾಕ್ಟರ್, ಎಂಜಿನಿಯರ್ಸ್‌, ಸ್ನಾತಕೋತ್ತರ ಪದವೀಧರರು ಹಾಗೂ ಅನಿವಾಸಿ ಭಾರತೀಯ ವೀರಶೈವ ವಧು ವರರಿಗೆ ವಿಶೇಷ ಮುಖಾಮುಖಿ ಸಮಾವೇಶವನ್ನು ಏರ್ಪಡಿಸಿದೆ. ವಿಳಾಸ : ಲಿಂಗಾಯತ ಕಲ್ಯಾಣ ಟ್ರಸ್ಟ್, ನಂ14, ಜಯದೇವ ವಾಣಿಜ್ಯ ಸಂಕೀರ್ಣ, 5ನೇ ಮುಖ್ಯ ರಸ್ತೆ,  ಗಾಂಧಿನಗರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 2226 9237.ಅನಾಥಾಶ್ರಮಕ್ಕೆ ಅರ್ಜಿ ಆಹ್ವಾನ

ಸ್ಪಂದನ ಉಚಿತ ಅನಾಥಾಶ್ರಮ ಹಾಗೂ ಶೈಕ್ಷಣಿಕ ಕ್ರೀಡಾ ವಿಕಸನ ಕೇಂದ್ರವು ವಿಧವೆಯರು, ಅಸಹಾಯಕ ವೃದ್ಧರು ಹಾಗೂ ಮಹಿಳೆಯರಿಂದ ಅನಾಥಾಶ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಇತ್ತೀಚಿನ ಎರಡು ಭಾವಚಿತ್ರ ಹಾಗೂ ಸ್ವವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ವಿಳಾಸ: ವೆಂಕಟೇಶ್, ಅಧ್ಯಕ್ಷರು, ಸ್ವಂದನ ಉಚಿತ ಅನಾಥಾಶ್ರಮ ಹಾಗೂ ಶೈಕ್ಷಣಿಕ ಕ್ರೀಡಾ ವಿಕಸನ ಕೇಂದ್ರ,  ಸಾಯಿ ಛೇಂಬರ್ಸ್‌, 2ನೇ ಮಹಡಿ, ನಂ.43, 9ನೇ ಅಡ್ಡ ರಸ್ತೆ, 50 ಅಡಿ ರಸ್ತೆ, ಹನುಮಂತನಗರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9482898888.ವೈಜ್ಞಾನಿಕ ಹಂದಿ ಸಾಕಾಣಿಕೆ ತರಬೇತಿ

ನಗರದ ಹೆಸರಘಟ್ಟ ಹಂದಿ ಸಂವರ್ಧನಾ ಕೇಂದ್ರ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಇದೇ 13 ರಿಂದ 15 ರವರೆಗೆ ವೈಜ್ಞಾನಿಕ ಹಂದಿ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತರು ತಮ್ಮ ಗುರುತಿನ ಚೀಟಿ ಮತ್ತು ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ತರಬೇತಿಗೆ ಹಾಜರಾಗಲು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 2846 6456, 94488 02608.ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ನಗರ ಜಿಲ್ಲಾ ಸಹಕಾರ ಒಕ್ಕೂಟ ಮತ್ತು ರಾಜ್ಯ ಅಪೆಕ್ಸ್ ಬ್ಯಾಂಕ್ ಸಹಯೋಗದಲ್ಲಿ  ಡಿಸೆಂಬರ್ 14 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ `ದೇಶದಲ್ಲಿ ಸಹಕಾರ ಚಳವಳಿ ನಡೆದುಬಂದ ಹಾದಿ' ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಒಂದು ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ವಿಳಾಸ: ಬಿ.ಇ.ಎಸ್.ಪದವಿಪೂರ್ವ ಕಾಲೇಜು, ಚರ್ಚ್ ಎದುರು, 4ನೇ ಹಂತ. ಜಯನಗರ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 2689 0071.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry