ಬುಧವಾರ, ಡಿಸೆಂಬರ್ 11, 2019
24 °C

ಸಿಟಿ ಹುಡ್ಗೀರ್ ಹಳ್ಳಿ ಆಟ...

Published:
Updated:
ಸಿಟಿ ಹುಡ್ಗೀರ್ ಹಳ್ಳಿ ಆಟ...

ಸಿಟಿ ಹುಡುಗಿಯರ ಮೈಮೇಲೆ ಇಳಕಲ್ ಸೀರೆ. ಒಂದು ಕಡೆ ಕುಂಟೋಬಿಲ್ಲೆ. ಅಟ್ಟಗುಣಿ ಮನೆ ಆಟವಾಡುವುದರಲ್ಲಿ ಕೆಲವರು ತಲ್ಲೆನರು.



ಕೃತಕ ತರಕಾರಿ ಮಾರ್ಕೆಟ್ ಸೃಷ್ಟಿಸಿ ಚೌಕಾಸಿ ಮಾಡಲು ಬಂದ ಗ್ರಾಹಕರನ್ನು ಥೇಟ್ ಹಳ್ಳಿಯವರ ಶೈಲಿಯಲ್ಲೇ ವ್ಯಾಪಾರಕ್ಕೆಳೆಯುವವರೂ ಅಲ್ಲಿದ್ದರು. ಹಳ್ಳಿತಿಂಡಿ ಮಾಡಿಟ್ಟು ಮುಖ ಅರಳಿಸಿದ ಹುಡುಗಿಯರ ದಂಡೂ ಇತ್ತೆನ್ನಿ. ಬಿ.ಎಂ.ಎಸ್. ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ `ಜಾನಪದ ಸಿರಿ~ಯ ಸೊಬಗು ಬಿಚ್ಚಿಕೊಂಡ ಚಿತ್ರವತ್ತಾದ ಕ್ಷಣಗಳಿವು.

 

ಪ್ರತಿಕ್ರಿಯಿಸಿ (+)