ಸಿಡಬ್ಲ್ಯುಜಿ ಹಗರಣ: ಸಿಬಿಐನಿಂದ ದಾಳಿ

7

ಸಿಡಬ್ಲ್ಯುಜಿ ಹಗರಣ: ಸಿಬಿಐನಿಂದ ದಾಳಿ

Published:
Updated:

ನವದೆಹಲಿ (ಪಿಟಿಐ): ಬಹುಕೋಟಿ ರೂಪಾಯಿಗಳ ಕಾಮನ್‌ವೆಲ್ತ್ ಕ್ರೀಡಾಕೂಟ (ಸಿಡಬ್ಲ್ಯುಜಿ) ಹಗರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಬಲೆ ಬೀಸಿರುವ ಸಿಬಿಐ ಶುಕ್ರವಾರ ಇಲ್ಲಿ ಕೆಲವು ಸಂಘಟನಾ ಸಮಿತಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ತೀವ್ರತರ ಕಾರ್ಯಾಚರಣೆ ನಡೆಸಿತು.ದಾಳಿಗೆ ಒಳಗಾದವರಲ್ಲಿ ಕಾಮನ್‌ವೆಲ್ತ್ ಸಂಘಟನಾ ಸಮಿತಿಯಲ್ಲಿದ್ದ ಹಿರಿಯ ಅಧಿಕಾರಿಗಳಾದ ಆರ್.ಪಿ. ಗುಪ್ತ, ಯು.ಕೆ. ರಿಧಿ, ಎ.ಕೆ. ಸಕ್ಸೇನ, ಸುರ್ಜೀತ್ ಲಾಲ್ ಹಾಗೂ ನುಕೇಶ್ ಜೈನ್ ಸೇರಿದ್ದಾರೆ.ಈ ಹಿಂದೆ ಗುರುವಾರ ಸಿಬಿಐ, ಕಾಮನ್‌ವೆಲ್ತ್ ಸಂಘಟನಾ ಸಮಿತಿಯ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿಯವರ ಆಪ್ತ ಸಹಾಯಕ ದೇವ್‌ರುಖರ್ ಶೇಖರ್ ಅವರನ್ನು ಬಂಧಿಸಿ, ತನಿಖೆಗೊಳಪಡಿಸಿದೆ.ಸುಮಾರು ರೂ 600 ಕೋಟಿಗಳ ಈ ಗುತ್ತಿಗೆ ಹಗರಣದಲ್ಲಿ ಅಂದಾಜಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ ವ್ಯಯ ಮಾಡಿದಂತೆ ತೋರಿಸಿ ಅವ್ಯವಹಾರ ನಡೆಸಿರುವ ಆರೋಪಗಳ ಬಗ್ಗೆ ಈ ತನಿಖೆ ನಡೆಯುತ್ತಿದೆ. ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವ ಸಂಬಂಧ ಮೂರು ಎಫ್‌ಐಆರ್‌ಗಳನ್ನು ಈಗಾಗಲೇ ಸಿಬಿಐ ದಾಖಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry