ಸಿಡಬ್ಲ್ಯುಜಿ: ಹೊಸ ಪ್ರಕರಣ ಸಿಬಿಐ ತನಿಖೆಗೆ

7

ಸಿಡಬ್ಲ್ಯುಜಿ: ಹೊಸ ಪ್ರಕರಣ ಸಿಬಿಐ ತನಿಖೆಗೆ

Published:
Updated:

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟ (ಸಿಡಬ್ಲ್ಯುಜಿ) ಕುರಿತಂತೆ ಕೆಲವು ಸರ್ಕಾರಿ ನೌಕರರು ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ನಡೆಸಿದ್ದಾರೆಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸಿವಿಸಿ ಹೊಸ ಪ್ರಕರಣಗಳನ್ನು ಸಿಬಿಐಗೆ ನೀಡಲಿದೆ.ಕೆಲವು ಸರ್ಕಾರಿ ಸಂಸ್ಥೆಗಳು ಕೈಗೊಂಡ ಸುಮಾರು 7 ಪ್ರಕರಣಗಳಲ್ಲಿ ಹಣಕಾಸು ಮತ್ತು ಆಡಳಿತಾತ್ಮಕ ಅವ್ಯವಹಾರಗಳು ನಡೆದಿರುವುದು ಪತ್ತೆಯಾಗಿದೆ ಎಂದು ಸಿವಿಸಿ ಮೂಲಗಳು ಹೇಳಿವೆ.`ಕಾಮಗಾರಿಗೆ ಟೆಂಡರ್‌ಗಳನ್ನು ಆಹ್ವಾನಿಸುವಲ್ಲಿ ಅವ್ಯವಹಾರಗಳು ನಡೆದಿವೆ ಅಲ್ಲದೆ ಆಯ್ದ ಕೆಲವರಿಗೆ ಅನಗತ್ಯ ಲಾಭ ಮಾಡಿಕೊಡಲಾಗಿದೆ. ಖಾಸಗಿ ಸಂಸ್ಥೆಗಳ ಮಾಲೀಕರು, ನೌಕರರೂ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭಿಸಿವೆ~ ಎಂದು ಸಿವಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕಳೆದ ವಾರ ನಡೆದ ಕೇಂದ್ರ ಜಾಗೃತ ಆಯೋಗದ ಪರಿಶೀಲನಾ ಸಭೆಯಲ್ಲಿ ಈ ವಿಷಯವನ್ನು ಸಿಬಿಐ ಅಧಿಕಾರಗಳ ಜತೆ ಚರ್ಚಿಸಲಾಗಿದೆ.`ಎಲ್ಲಾ ಅಗತ್ಯ ದಾಖಲೆಗಳನ್ನು ಮತ್ತು ವಿಷಯದ ಬಗ್ಗೆ ಆಯೋಗ ಪತ್ತೆ ಹಚ್ಚಿರುವ ಮಾಹಿತಿಗಳನ್ನು ಸಿಬಿಐ ಪಡೆದುಕೊಂಡಿದೆ~ ಎಂದು ಹೇಳಿದ್ದಾರೆ.ಕಳೆದ ವರ್ಷ ಅಕ್ಟೋಬರ್ 3-14ರ ಅವಧಿಯಲ್ಲಿ ನಡೆದ ಕ್ರೀಡಾಕೂಟಕ್ಕಾಗಿ ಜಾರಿಗೊಳಿಸಿದ ಯೋಜನೆಗಳ ಪೈಕಿ ಕನಿಷ್ಠ 71 ಯೋಜನೆಗಳ  ಬಗ್ಗೆ ಸಿವಿಸಿ ತನಿಖೆ ನಡೆಸುತ್ತಿದೆ.`ಸಂಘಟನಾ ಸಮಿತಿಯಲ್ಲಿ ಅರ್ಹತೆ ಮತ್ತು ಸೂಕ್ತ ಹಿನ್ನೆಲೆ ಇರದ ಅನೇಕರನ್ನು ನೇಮಕ ಮಾಡಿಕೊಂಡಿರುವಲ್ಲಿ ಮಾಜಿ ಮತ್ತು ಹಾಲಿ ಅಧಿಕಾರಿಗಳ ಪಾತ್ರವಿದೆ ಎಂಬ ಆರೋಪದ ಅನೇಕ ದೂರುಗಳು ಬಂದಿವೆ. ಇವುಗಳನ್ನು ಪರಿಶೀಲಿಸಲಾಗುತ್ತಿದ್ದು ಸಿಬಿಐಗೆ ಹಸ್ತಾಂತರಿಸಲಾಗುವುದು~ ಎಂದು ಸಿವಿಸಿ ಅಧಿಕಾರಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry