ಭಾನುವಾರ, ಮೇ 16, 2021
23 °C

ಸಿಡಿಲಿಗೆ ಎರಡು ಹೋರಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಳಿಯಾರು: ಸಿಡಿಲು ಬಡಿದು ಎರಡು ಹೋರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೋಬಳಿಯ ಬರಕನಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರೇಹಳ್ಳಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ.



ಹೋರಿಗಳು ಯರೇಹಳ್ಳಿ ಗ್ರಾಮದ ನಾಗರಾಜು ಎಂಬುವವರಿಗೆ ಸೇರಿದ್ದು, ಮುಂಗಾರು ಬಿತ್ತನೆಗೆ ತೆರಳಿದ್ದು, ಮಳೆ ಬರುವ ಸೂಚನೆ ಅರಿತು ಮನೆಗೆ ವಾಪಸಾಗುವ ವೇಳೆ ಈ ಘಟನೆ ನಡೆದಿದೆ.



ಮಳೆ ಹನಿ ಬೀಳುತ್ತಿದ್ದ ಪರಿಣಾಮ ನಾಗರಾಜು ಹುಣಸೆಮರದ ಕೆಳಗೆ ಗಾಡಿ, ಹೋರಿಗಳನ್ನು ಬಿಟ್ಟು ಮರದ ಬಳಿ ತೆರಳ್ದ್ದಿದಾಗ ಸಿಡಿಲು ಬಡಿದು ಹೋರಿಗಳು ಸಾವನ್ನಪ್ಪಿವೆ. ನಾಗರಾಜು ಅವಘಡದಿಂದ ಪಾರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.