ಸಿಡಿಲು:ಇಬ್ಬರಿಗೆ ಗಾಯ
ಹೊನ್ನಾವರ: ಭಾನುವಾರ ರಾತ್ರಿ ಸಿಡಿಲಿಗೆ ತಾಲ್ಲೂಕಿನಲ್ಲಿ ಇಬ್ಬರು ಗಾಯಗೊಂಡಿದ್ದು ಒಂದು ಆಕಳು ಸಾವಿಗೀಡಾಗಿದೆ.
ದುಗ್ಗೂರಿನ ತುಳಸು ಕುಪ್ಪ ಗೌಡ, ಲಲಿತಾ ಹಾಗೂ ಮಾಲಿನಿ ಗಾಯ ಗೊಂಡವರು. ಇದೇ ವೇಳೆ ಸಾಲ್ಕೋಡದ ಸಾವಿತ್ರಿ ಸುಬ್ರಾಯ ಹೆಗಡೆ ಎಂಬವರಿಗೆ ಸೇರಿದ ದನದ ಕೊಟ್ಟಿಗೆಗೆ ಬಡಿದ ಸಿಡಿಲಿಗೆ ದನ ಬಲಿಯಾಗಿದೆ.
ಮುಗ್ವಾ ಗ್ರಾಮದ ಹಳಗೇರಿಯ ಮಂಜುನಾಥ ಕ್ಯಾಸ ಗೌಡ ಅವರ ಮನೆ ಮಳೆಯಿಂದ ಭಾಗಶಃ ಹಾನಿ ಗೊಳಗಾಗಿದೆ. ಭಾನುವಾರ ತಾಲ್ಲೂಕಿ ನಾದ್ಯಂತ ಗುಡುಗು ಸಹಿತ ಮಳೆ ಬಿದ್ದಿದ್ದು 51 ಮಿ.ಮೀ.ಮಳೆ ದಾಖ ಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.