ಸಿಡಿಲು ಬಡಿದು ನಾಲ್ಕು ಜನರ ಸಾವು

7

ಸಿಡಿಲು ಬಡಿದು ನಾಲ್ಕು ಜನರ ಸಾವು

Published:
Updated:

ಬೆಂಗಳೂರು: ರಾಜ್ಯದಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಸಂಭವಿಸಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು ಒಟ್ಟು ನಾಲ್ವರು ಮೃತರಾಗಿದ್ದಾರೆ.ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಮಾದೇನಹಳ್ಳಿಯಲ್ಲಿ ಗುರುವಾರ ರಾತ್ರಿ ಸಿಡಿಲು ಬಡಿದು  ಮೋಹನ್‌ಕುಮಾರ್ (26) ಹಾಗೂ ತಿಮ್ಮರಾಜು (17) ಎಂಬುವವರು ಮೃತರಾದರು. ಇವರು ಜಮೀನಿನಲ್ಲಿ ಈರುಳ್ಳಿ ಬೆಳೆ ತಿನ್ನಲು ಬರುತ್ತಿದ್ದ ಕಾಡು ಹಂದಿಗಳನ್ನು ಓಡಿಸಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.ಇವರು ಮೊಬೈಲ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಹಾಗೆಂದು  ಸ್ಥಳಕ್ಕೆ ಹೋಗಿ ನೋಡಿದಾಗ ಸಿಡಿಲು ಬಡಿದಿದ್ದು ತಿಳಿದಿದೆ. ಮೋಹನ್ ಕುಮಾರ್ ಟ್ರ್ಯಾಕ್ಟರ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು.ವೃದ್ಧೆ ಸಾವು:  ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಕಾಶಿಪಟ್ಣ ಗ್ರಾಮದ ಪೇರಂದಡ್ಕ ಎಂಬಲ್ಲಿ ಶುಕ್ರವಾರ ಸಂಜೆ ಮನೆಯೊಂದಕ್ಕೆ ಸಿಡಿಲು ಬಡಿದು  ಉಸ್ಮಾನ್ ಎಂಬುವವರ ಪತ್ನಿ ಬಿಫಾತಿಮಾ (85) ಸ್ಥಳದಲ್ಲೇ ಮೃತಪಟ್ಟರು.ಗೋಕಾಕ ತಾಲ್ಲೂಕಿನ ಗೋಕಾಕ ಫಾಲ್ಸ್ ಬಳಿ ಶುಕ್ರವಾರ ಧಾರಾಕಾರ ಮಳೆ ವೇಳೆ ಮೇಕೆಗಳನ್ನು ಮೇಯಿಸುತ್ತಿದ್ದ  ಮಹಾಲಿಂಗಪ್ಪ ಅಪ್ಪಣ್ಣ ಮುದವ್ವಗೋಳ (49) ಎಂಬುವವರು ಸಿಡಿಲಿಗೆ ಬಲಿಯಾಗಿದ್ದಾರೆ.

ಯಲ್ಲಪ್ಪ ಫಕೀರಪ್ಪ ಕಾಳ್ಯಾಗೋಳ ಎಂಬುವವರು ತೀವ್ರ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry