ಶುಕ್ರವಾರ, ಜೂನ್ 25, 2021
27 °C

ಸಿಡಿ ಉತ್ಸವದಲ್ಲಿ ಮುಸ್ಲಿಮರಿಂದ ಕುಡಿಯುವ ನೀರು ವಿತರಣೆ; ಭರ್ಜರಿ ವ್ಯಾಪಾರ ವಹಿವಾಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಪಟ್ಟಣದ ಪ್ರಸಿದ್ಧ ದೇವತೆ ಚಳ್ಳಕೆರೆಯಮ್ಮನ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಸಿಡಿ ಉತ್ಸವದಲ್ಲಿ ಜಾನಪದ ಕಲಾವಿದರ ತಂಡಗಳು ನೆರೆದಿದ್ದ ಸಾವಿರಾರು ಭಕ್ತರ ಗಮನ ಸೆಳೆಯುವಂತೆ ಮಾಡಿದವು.ಗ್ರಾಮೀಣ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಜಾನಪದ ಕಲಾತಂಡಗಳಾದ ಮಹಿಳೆಯರ ತಮಟೆ ವಾದನ, ಬಾಲಕರ ಕೋಲಾಟ, ಪೋತರಾಜರ ನೃತ್ಯ, ಉರಿಮೆ, ಕಂಸಾಳೆ ವಿವಿಧ ರೀತಿಯ ಕಲಾ ತಂಡಗಳು ಸಿಡಿ ಉತ್ಸವದ ಮೆರವಣಿಗೆಗೆ ರಂಗು ತಂದವು.ಜಾನಪದ ಕಲಾ ತಂಡಗಳ ಕಲಾವಿದರು ನೆರೆದವರನ್ನು ಉತ್ತೇಜಿಸುವಂತೆ ತಮ್ಮ ಕಲೆಯನ್ನು ಪ್ರದರ್ಶನ ಮಾಡುತ್ತಿರುವುದು ಕಂಡುಬಂದಿತು. ಮಹಿಳಾ ತಮಟೆ ವಾದಕರು ಮಾತ್ರ ಎಲ್ಲರ ಮೆಚ್ಚುಗೆ ಗಳಿಸುವಂತೆ ತಮಟೆ ಬಡಿಯುತ್ತಿರುವುದು ಜನರನ್ನು ಆಕರ್ಷಿಸಿತು.ಭರ್ಜರಿ ವ್ಯಾಪಾರ: ಚಳ್ಳಕೆರೆಯಮ್ಮನ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಸಿಡಿ ಉತ್ಸವದ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯಿತು. ಹೆಂಗಳೆಯರು ಬಳೆ, ಮಕ್ಕಳ ವಿವಿಧ ಆಟದ ಸಾಮಾನುಗಳು ಸೇರಿದಂತೆ ಬಿಸಿಲಿನ ತಾಪಕ್ಕೆ ಎಳೆನೀರು, ತಂಪು ಪಾನೀಯಗಳ ಮಾರಾಟ ಭರಾಟೆಯಿಂದ ಕೂಡಿತ್ತು.ಚಳ್ಳಕೆರೆಯಮ್ಮನ ದೊಡ್ಡ ಜಾತ್ರೆ ಅಂಗವಾಗಿ ಇಲ್ಲಿನ ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಮುಸ್ಲಿಂ ಯುವಕರು ಹಿಂದೂಗಳ ಹಬ್ಬವಾದರೂ ಬಿಸಿಲಿಗೆ ದಾಹ ತಣಿಸಲು ಭಕ್ತರಿಗೆ ಕುಡಿಯುವ ನೀರು ಸೇವೆಯನ್ನು ಮಾಡಿ ಭಾವೈಕ್ಯತೆಗೆ ಸಾಕ್ಷಿಯಾದರು.ನೀರು ವಿತರಣೆ: ಚಳ್ಳಕೆರೆಯಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಇಲ್ಲಿನ ಬೆಂಗಳೂರು ರಸ್ತೆಯ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಮುಖಂಡ ಟಿ. ರಘುಮೂರ್ತಿ ನೇತೃತ್ವದಲ್ಲಿ ಸಹಸ್ರರಾರು ಭಕ್ತರಿಗೆ ಕುಡಿಯುವ ನೀರು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದು ಭಕ್ತರಿಗೆ ಕುಡಿಯುವ ನೀರಿನ ಕೊರತೆ ಕಾಣದಂತೆ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಿ ವಿತರಿಸಿದರು.ಇಲ್ಲಿನ ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿ ವೀರಶೈವ ಸಮಾಜದವರು ಕುಡಿಯುವ ನೀರು ವಿತರಣೆ ಮಾಡಿದರು.ಪುರಸಭೆ ಸದಸ್ಯರಾದ ಗಾಡಿ ತಿಪ್ಪೇಸ್ವಾಮಿ, ಚೇತನ್‌ಕುಮಾರ್, ಪ್ರಸನ್ನಕುಮಾರ್ ಭಕ್ತರಿಗೆ ಪಾಲಕ ವಿತರಣೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.